ಮಹಿಳೆಯರಿಗೆ ಪ್ರತಿ ತಿಂಗಳಿಗೆ 2000 ಸಹಾಯಧನ ಸಿಗಲಿದೆ,ಅದಕ್ಕೆ ಬೇಕಾಗುವಂತಹ ಅರ್ಹತೆಗಳು.
ರಾಜ್ಯ ಸರ್ಕಾರ ತೀರ್ಮಾನಿಸಿದಂತೆ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಅಂದರೆ ಪ್ರತಿ ಕುಟುಂಬವನ್ನು ಮುನ್ನಡೆಸುವಂತಹ ಮಹಿಳೆಗೆ ಪ್ರತಿ ತಿಂಗಳು 2000 ರೂಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತೆ. ಅದು ಹೇಗೆ ಎಂದು ತಿಳಿದುಕೊಳ್ಳಲು ಕೆಳಗಡೆ ನೀಡಲಾದ ಸಂಪೂರ್ಣ ಮಾಹಿತಿಯನ್ನು ಓದಿ.
ರಾಜ್ಯ ಸರ್ಕಾರವು ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ರಸಾಹಸ ಮಾಡುತ್ತಿದೆ. ಅವುಗಳು ಯಾವವೆಂದರೆ ಗೃಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಯುವನಿಧಿ ಯೋಜನೆ, ಅನ್ನ ಭಾಗ್ಯ ಯೋಜನೆ, ಉಚಿತ ಪ್ರಯಾಣ ಯೋಜನೆ, ಇವೆಲ್ಲ ಯೋಜನೆಗಳಲ್ಲಿ ಅತಿ ಮುಖ್ಯವಾದ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ ಈ ಯೋಜನೆಯವ ಪ್ರತಿ ಕುಟುಂಬದ ಮನೆ ಯಜಮಾನಿಗೆ ಈ ಒಂದು ಯೋಜನೆ ಸಿಗಲಿದೆ.
ಈ ಯೋಜನೆ ಪಡೆಯಲು ಈ ಲಿಂಕ್ ಮಾಡಬೇಕಾಗುತ್ತದೆ
ಗೃಹಲಕ್ಷ್ಮಿ ಯೋಜನೆಯಲ್ಲಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000.ರೂ ಹಣ ನೇರವಾಗಿ ಅವರ ಖಾತೆಗೆ ಜಮೆ ಆಗಬೇಕಾದರೆ ಅವರ ಬ್ಯಾಂಕ್ ಅಕೌಂಟ್ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಇರಲೇಬೇಕಾಗುತ್ತದೆ. ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಈ ಒಂದು ಯೋಜನೆಯ ಹಣ ನಿಮ್ಮ ಖಾತೆಗೆ ಬರುವದಿಲ್ಲ. ಆದಕಾರಣ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಸ್ಟೇಟಸ್ ತಿಳಿದುಕೊಳ್ಳಲು ನಿಮ್ಮ ಒಂದು ಬ್ಯಾಂಕಿಗೆ ಭೇಟಿ ನೀಡಿ ಪರಿಶೀಲಿಸಬೇಕಾಗುತ್ತದೆ.
ಈ ಯೋಜನೆ ಜೂನ್ ಒಂದರಿಂದ ಪ್ರಾರಂಭವಾಗಲಿದೆ
ಸರ್ಕಾರ ಈಗಾಗಲೇ ಹೇಳಿರುವ ಮಾಹಿತಿ ಪ್ರಕಾರ ಈ ಯೋಜನೆಯನ್ನು ಜೂನ್ ಒಂದರಿಂದ ಪ್ರಾರಂಭ ಮಾಡಲು ಎಲ್ಲ ಡೇಟಾವನ್ನು ಸಂಗ್ರಹಿಸಿದೆ. ಸಂಗ್ರಹಿಸಿದ ಮಾಹಿತಿ ಪ್ರಕಾರ ಎಲ್ಲ ಮಹಿಳೆಯರಿಗೆ ಈ ಯೋಜನೆ ಸಿಗಲಿದೆ.
ಬೇಕಾಗುವಂತಹ ದಾಖಲಾತಿಗಳು
ಈ ಯೋಜನೆಯನ್ನು ಪಡೆಯಬೇಕಾದರೆ ಕೆಲವು ದಾಖಲಾತಿಗಳನ್ನು ಕೊಡಬೇಕಾಗುತ್ತದೆ ಅವುಗಳು ಯಾವವು ಅಂದರೆ
· ಆಧಾರ್ ಕಾರ್ಡ್
· ರೇಷನ್ ಕಾರ್ಡ್
· ಜಾತಿ ಮತ್ತು ಆದಾಯ ಪ್ರಮಾಣ ಪತ್ರ
· ಪ್ಯಾನ್ ಕಾರ್ಡ್
· ಪಾಸ್ಪೋರ್ಟ್ ಸೈಜ್ ಫೋಟೋ
ಈ ಎಲ್ಲ ದಾಖಲಾತಿಗಳನ್ನು ಕೇಳಬಹುದು ಆದಕಾರಣ ನಿಮ್ಮ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಿ









