2023 ರಲ್ಲಿ ಬರುವಂತಹ ಎಲ್ಲಾ ಸರ್ಕಾರಿ ಯೋಜನೆಗಳಲ್ಲಿ ಇತ್ತೀಚಿಗೆ ಘೋಷಣೆಯಾದ 5 ಗ್ಯಾರಂಟಿ ಯೋಜನೆಗಳು ಮತ್ತು ಅವುಗಳು ಯಾವವು ಅಂದರೆ. ಈ ಗ್ಯಾರಂಟಿ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿದ್ದಂತೆ, ಲಕ್ಷಾಂತರ ಜನರ ಜೀವನವನ್ನು ಮರು ವ್ಯಾಖ್ಯಾನಿಸುವ ಮತ್ತು ಎಲ್ಲಾ ನಾಗರಿಕರಿಗೆ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಸಾಮರ್ಥ್ಯವನ್ನು ಅವು ಹೊಂದಿವೆ.
- ಗೃಹಲಕ್ಷ್ಮಿ ಯೋಜನೆ
- ಗೃಹಜೋತಿ ಯೋಜನೆ
- ಯುವನಿಧಿ
- ಮಹಿಳೆಯರಿಗೆ ಉಚಿತ ಪ್ರಯಾಣ
- ಅನ್ನಭಾಗ್ಯ
ಇವೆಲ್ಲ ಯೋಜನೆಗಳು 2023ರಲ್ಲಿ ಜಾರಿಯಾಗಲಿವೆ. ಈಗಿನ ಸರ್ಕಾರವು ಈ ಯೋಜನೆಗಳನ್ನು ಜಾರಿಗೆ ತರಲು ಆದೇಶ ಮಾಡಿದೆ ಅಂತಾನೆ ಹೇಳಬಹುದು, ಈ 5 ಯೋಜನೆಗಳು ಯಾವಾಗ ಜಾರಿಗುತ್ತವೆ ಇದರ ಸಂಪೂರ್ಣ ಮಾಹಿತಿ ಇಲ್ಲಿ ಇದೆ.
ಈ ಎಲ್ಲ ಯೋಜನೆಗಳ ಫಲಾನುಭವಿಯಾಗಲು
ಯಾರಿಗೆಲ್ಲ ಅರ್ಹತೆ ಇದೆ ಇದರ ಒಂದು
ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ ಪೂರ್ತಿಯಾಗಿ ಓದಿ





1. ಗೃಹಲಕ್ಷ್ಮಿ ಯೋಜನೆ:
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಪಡೆಯಬಹುದು, ಕುಟುಂಬವನ್ನು ಮುನ್ನಡೆಸುವ ಪ್ರತಿಯೊಬ್ಬ ಮಹಿಳೆಗೆ ರೂ 2,000 ಅನುದಾನವನ್ನು ನೀಡುತ್ತದೆ
2. ಗೃಹಜೋತೆ ಯೋಜನೆ:
ಗೃಹಜೋತೆ ಯೋಜನೆ ಅಡಿಯಲ್ಲಿ ಪ್ರತಿಯೊಂದು ಮನೆಗೂ ಎರಡು ನೂರು ಯೂನಿಟ್ ಉಚಿತ ಕರೆಂಟ್ ಪಡೆಯಬಹುದು. ವಿದ್ಯುತ್ ವೆಚ್ಚದ ಹೊರೆಯನ್ನು ಕಡಿಮೆ ಮಾಡುವ ಮೂಲಕ, ಗೃಹ ಜ್ಯೋತಿ ಎಲ್ಲರಿಗೂ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುತ್ತದೆ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
3. ಯುವನಧಿ ಯೋಜನೆ ಯುವನಧಿ ಯೋಜನೆ ಅಡಿಯಲ್ಲಿ ಇತ್ತೀಚಿಗೆ ಪದವಿ ಹೊಂದಿರುವ ಎಲ್ಲ ಯುವಕರಿಗೆ ಕೆಲಸ ಸಿಗುವವರೆಗೂ ಗರಿಷ್ಠ ಎರಡು ವರ್ಷಗಳ ಕಾಲ ಪ್ರತಿ ತಿಂಗಳು 3000 ಹಣವನ್ನು ನೇರವಾಗಿ ನಿಮ್ಮ ಒಂದು ಖಾತೆಗೆ ಜಮಾ ಮಾಡಲಾಗುವುದು ಮತ್ತು ಡಿಪ್ಲೋಮಾ ಮಾಡಿರುವಂತಹ ಎಲ್ಲಾ ಯುವಕರಿಗೆ ಕೆಲಸ ಸಿಗುವವರೆಗೂ ಗರಿಷ್ಠ ಎರಡು ವರ್ಷಗಳ ಕಾಲ ಪ್ರತಿ ತಿಂಗಳು 1500 ಹಣವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಬಹುದು
4. ಉಚಿತ ಬಸ್ ಪಾಸ್:
ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಈ ಒಂದು ಪಾಸ್ ಮೂಲಕ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಅದು ಕರ್ನಾಟಕದ ಮಹಿಳೆಯರಿಗೆ ಮಾತ್ರ.
5. ಅನ್ನಭಾಗ್ಯ ಯೋಜನೆ
ಈ ಒಂದು ಯೋಜನೆ ಅಡಿಯಲ್ಲಿ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಪ್ರತಿ ತಿಂಗಳು ಕುಟುಂಬದಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ಉಚಿತ ಈ ಒಂದು ಯೋಜನೆ ಪಡೆಯಲು ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇರಬೇಕಾಗುತ್ತದೆ. ಅನ್ನ ಭಾಗ್ಯವು ಸಮಾಜದ ದುರ್ಬಲ ವರ್ಗಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.