ಕರ್ನಾಟಕ ರಾಜ್ಯದಲ್ಲಿ ಎಲ್ಲ ಮಹಿಳೆಯರಿಗೂ ಎರಡು ಸಾವಿರ ಹಣ ನೇರವಾಗಿ ತಮ್ಮ ಬ್ಯಾಂಕ್ ಅಕೌಂಟಿಗೆ ಸಿಗಲಿದೆ. ಈ ಒಂದು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲಾತಿ ಬೇಕು ಮತ್ತೆ ಅರ್ಹತೆ ಏನು ಬೇಕು
- ಯಾವಾಗ ಈ ಒಂದು ಅರ್ಜಿ ಪ್ರಾರಂಭವಾಗುತ್ತೆ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- ಅರ್ಜಿ ಸಲ್ಲಿಸಲು ಅರ್ಜಿ ನಮೂನೆ
ಈ ಎಲ್ಲ ವಿವರಗಳು ಈ ಒಂದು ಲೇಖನದಲ್ಲಿ ನೋಡಬಹುದು
ರಾಜ್ಯ ಸರ್ಕಾರ ತೀರ್ಮಾನ ಮಾಡಿರುವ ಹಾಗೆ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾದ ಗ್ರಹಲಕ್ಷ್ಮಿ ಯೋಜನೆ ಈ ಯೋಜನೆಗೆ ಪ್ರತೀ ಕುಟುಂಬದ ಯಜಮಾನ ಅರ್ಹರಿರುತ್ತಾರೆ ಮತ್ತೆ ಈ ಒಂದು ಅರ್ಜಿ ಸಲ್ಲಿಸಲು ಸರಿಯಾದ ದಾಖಲಾತಿಗಳೊಂದಿಗೆ ಸಲ್ಲಿಸಬಹುದು
ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ
ರಾಜ್ಯ ಸರ್ಕಾರ ತೀರ್ಮಾನ ಮಾಡಿರುವ ಹಾಗೆ ಜೂನ್ 15ರಂದು ಪ್ರಾರಂಭವಾಗಬೇಕಿತ್ತು ಸರ್ವರ್ ಪ್ರಾಬ್ಲಮ್ ಆಗಬಾರದೆಂದು ಈ ಒಂದು ಯೋಜನೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಲವಾಗಿದೆ. ಮತ್ತೆ
- ಈ ಒಂದು ಅರ್ಜಿ ಜೂನ್ 22 ಅಥವಾ 23 ರಂದು ಪ್ರಾರಂಭವಾಗಬಹುದು.
- ಈ ಒಂದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಇರುವುದಿಲ್ಲ.
ಯಾವಾಗ ಬೇಕಾದರೂ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದು ಅಥವಾ ಆಫ್ಲೈನ್ ಮುಖಾಂತರ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ ಈ ಒಂದು ಅರ್ಜಿಯನ್ನು ಸೇವಾ ಸಿಂಧು ಮುಖಾಂತರ ಸಲ್ಲಿಸಬಹುದು ಅಂತ ಹೇಳಿದ್ರು ಆದರೆ ಈ ಒಂದು ಸರ್ವರ್ ಪ್ರಾಬ್ಲಮ್ ಇರೋದು ಕೋಸ್ಕರ ಈ ಒಂದು ಅರ್ಜಿಯನ್ನು https://sevasindhugs1.karnataka.gov.in/gl-sp/ ಈ ಒಂದು ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಹಂತ 1 : ಅರ್ಜಿಯನ್ನು ಸಲ್ಲಿಸಬೇಕಾದರೆ https://sevasindhugs.karnataka.gov.in/ ಈ ಒಂದು ಲಿಂಕ್ ಮುಖಾಂತರ ಓಪನ್ ಮಾಡಬೇಕು
ಹಂತ 2 : ಲಿಂಕ್ ಓಪನ್ ಆದಮೇಲೆ ಸರಕಾರ ನೀಡಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಈ ಒಂದು ವೆಬ್ಸೈಟ್ನಲ್ಲಿ ನೋಡಬಹುದು ಇದರಲ್ಲಿ ಮೊದಲನೇ ಆಯ್ಕೆ ಗೃಹಲಕ್ಷ್ಮಿ ಯೋಜನೆ ಕ್ಲಿಕ್ ಮಾಡಬೇಕಾಗುತ್ತೆ.
ಹಂತ 3 : ಅರ್ಜಿಯನ್ನ ಸಲ್ಲಿಸುವ ಕಿಂತ ಮುಂಚೆ ಅದರ ಸಂಪೂರ್ಣ ಮಾಹಿತಿಯನ್ನು ಓದಿ ನಂತರ ಅರ್ಜಿಯನ್ನು ಸಲ್ಲಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4 : ಅರ್ಜಿ ಓಪನ್ ಆದಮೇಲೆ ನಿಮ್ಮ ಮಾಹಿತಿಯನ್ನು ಸರಿಯಾಗಿ ಎಂಟ್ರಿ ಮಾಡಬೇಕು.
ಹಂತ 5 : ನಂತರ ನಿಮ್ಮ ಎಲ್ಲ ಮಾಹಿತಿ ಸರಿಯಾಗಿ ಇದೆ ಎಂದು ಪರಿಶೀಲಿಸಿ, ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6 : ಅಗತ್ಯವಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತೆ.
ಹಂತ 7 : ದಾಖಲಾತಿಗಳನ್ನು ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸಬ್ಮಿಟ್ ಆಗುತ್ತೆ.
ಅರ್ಜಿ ಸಲ್ಲಿಸಬೇಕಾದರೆ ಬೇಕಾಗುವಂತಹ ದಾಖಲಾತಿಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- ಗಂಡನ ಆಧಾರ್ ಕಾರ್ಡ್
- ಗಂಡನ ವೋಟರ್ ಐಡಿ
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋ
- ಅರ್ಜಿ ನಮೂನೆ
ಈ ಎಲ್ಲ ದಾಖಲಾತಿಗಳು ಈ ಒಂದು ಅರ್ಜಿಯನ್ನು ಸಲ್ಲಿಸಲು ಬೇಕಾಗುತ್ತೆ.
ಅರ್ಜಿ ಸಲ್ಲಿಸಲು ಅರ್ಹತೆ ಏನು
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಅರ್ಹತೆ ಇರಬೇಕಾಗುತ್ತೆ ಅದರಲ್ಲಿ ಮೊದಲು
- ಗ್ರಹಲಕ್ಷ್ಮಿ ಯೋಜನೆ, ಅರ್ಜಿ ಸಲ್ಲಿಸಲು ಮಹಿಳೆ ಮಹಿಳೆಯು ಕರ್ನಾಟಕದವರಾಗಿರಬೇಕು.
- ರೇಷನ್ ಕಾರ್ಡ್ ಕಡ್ಡಾಯ.
- ಎಪಿಎಲ್ ರೇಷನ್ ಕಾರ್ಡ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಇದ್ರೂ ನಡೆಯುತ್ತೆ.
- ಬ್ಯಾಂಕ್ ಅಕೌಂಟ್ ಹೊಂದಿರಬೇಕು.
- ಬ್ಯಾಂಕ್ ಅಕೌಂಟಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
- ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಇರಬೇಕು.
ಈ ಎಲ್ಲಾ ಅರ್ಹತೆಗಳೊಂದಿಗೆ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು.