ಗೃಹಲಕ್ಷ್ಮಿ ಯೋಜನೆ ಶೀಘ್ರದಲ್ಲೇ ಪ್ರಾರಂಭ

ನಮಸ್ಕಾರ ಸ್ನೇಹಿತರೆ ರಾಜ್ಯ ಸರಕಾರ ಘೋಷಣೆ ಮಾಡಿರುವ ಹಾಗೆ ಗ್ರಹಲಕ್ಷ್ಮಿ ಯೋಜನೆ ಜಾರಿಯಲ್ಲಿದ್ದು. ಯೋಜನೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಅತಿ ಶೀಘ್ರದಲ್ಲೇ ಜಾರಿಯಾಗಲಿದ್ದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಗ್ರಹಲಕ್ಷ್ಮಿ ಯೋಜನೆ ರಾಜ್ಯದ ಎಲ್ಲಾ ಮನೆ ಯಜಮಾನಿಯರಿಗೆ ಅನ್ವಯಿಸುತ್ತದೆ. ಅಂದರೆ ಒಂದು ಕುಟುಂಬದ ಮುಖ್ಯಸ್ಥರಿಗೆ ಒಂದು ಯೋಜನೆ ಸಿಗುತ್ತೆ ಅಂತ ಹೇಳಬಹುದು.

ಗೃಹಲಕ್ಷ್ಮಿ ಯೋಜನೆ, ಅರ್ಜಿ ಸಲ್ಲಿಸಲು ಬೇಕಾಗುವಂತಹ ಎಲ್ಲ ದಾಖಲಾತಿಗಳನ್ನ  ಸಿದ್ದಪಡಿಸಿಕೊಳ್ಳಬೇಕು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದಿಂದ ಅರ್ಜಿಯನ್ನು ಸಲ್ಲಿಸಬಹುದಾಗುತ್ತೆ. ಈ ಒಂದು ಅರ್ಜಿ ಸಲ್ಲಿಸಲು ಆನ್ಲೈನ್ ಮುಖಾಂತರ ಸಲ್ಲಿಸಬಹುದು ಅಥವಾ ಮೊಬೈಲ್ ಆಪ್ ಮೂಲಕ ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ವಿಧಾನ:

ಗ್ರಹಲಕ್ಷ್ಮಿ ಅರ್ಜಿ ಸಲ್ಲಿಸುವಾಗ ಆನ್ಲೈನ್ ಮುಖಾಂತರ ಸಲ್ಲಿಸಬಹುದು ಅಥವಾ ಮೊಬೈಲ್ ಆಪ್ ಬಿಡುಗಡೆ ಮಾಡಲಿದ್ದಾರೆ ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಈಗಾಗಲೇ ಅರ್ಜಿ ದಿನಾಂಕ ಮುಂದೂಡಿಕೆಯಾಗಿದ್ದು ದಿನಾಂಕ 15/06/2023 ರಂದು ಬಿಡುಗಡೆ ಮಾಡಬೇಕಾಗಿತ್ತು, ಆದರೆ ಸರ್ವರ್ ತೊಂದರೆ ಆದ ಕಾರಣ ಮುಂದುವರಿಕೆಯಾಗಿದೆ. ಈ ಒಂದು ಅರ್ಜಿ ಸಲ್ಲಿಸುವ ದಿನಾಂಕ ಜೂನ್ 1ರಿಂದ ಪ್ರಾರಂಭವಾಗಬಹುದು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅತಿ ಶೀಘ್ರದಲ್ಲೇ ಮೊಬೈಲ್ ಲಾಂಚ್ ಮಾಡಲಿದ್ದಾರೆ. ಈ ಒಂದು ಆಪ್ ಮೂಲಕ ಮನೆಯಲ್ಲಿ ಕುಳಿತುಕೊಂಡು ಅರ್ಜಿಯನ್ನು ಸಲ್ಲಿಸಬಹುದು.

ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸುವುದು ಸಲ್ಲಿಸಬಹುದು:

  • ಗೃಹಲಕ್ಷ್ಮಿ ಯೋಜನೆ ಮೊಬೈಲ್ ಆಪ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ. ಪ್ರತಿಯೊಂದು ಕುಟುಂಬದ ಮನೆ ಯಜಮಾನಿ ಈ ಒಂದು ಆಪ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
  •  ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲಾತಿಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಬೇಕು.
  • ನಂತರ ಅರ್ಜಿ ಸಲ್ಲಿಸಬೇಕಾದರೆ ಎಲ್ಲ ದಾಖಲಾತಿಗಳನ್ನು ಅಪ್ಲೋಡ್ ಮಾಡಬಹುದು.ನಂತರ ಅರ್ಜಿ ಸಲ್ಲಿಸಬಹುದು.

ಆಪ್ ಡೌನ್ಲೋಡ್ ಮಾಡುವ ವಿಧಾನ:

  • ಗ್ರಹಲಕ್ಷ್ಮಿ ಆಪ್ ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದು ಅದನ್ನು ಪ್ಲೇ ಸ್ಟೋರ್ ಮುಖಾಂತರ ಡೌನ್ಲೋಡ್ ಮಾಡಬಹುದು.
  • ಅದು ಹೇಗೆಂದರೆ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್ ಓಪನ್ ಮಾಡಬೇಕಾಗುತ್ತೆ.
  • ನಂತರ ಸರ್ಚ್ ಬಾಕ್ಸ್ ಅಲ್ಲಿ ಗ್ರಹಲಕ್ಷ್ಮಿ ಎಂದು ಎಂಟ್ರಿ ಮಾಡಿ ನಂತರ ಗೃಹಲಕ್ಷ್ಮಿ ಅಧಿಕೃತ ಆಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಅರ್ಜಿನ ಸಲ್ಲಿಸಬಹುದು.
  • ಈಗಾಗಲೇ ಪ್ಲೇ ಈಗಾಗಲೇ ಪ್ಲೇ ಸ್ಟೋರ್ ನಲ್ಲಿ  ಗೃಹಲಕ್ಷ್ಮಿ ನಕಲಿ ಆಪ್ ಗಳು ಇದ್ದಾವೆ ಅದನ್ನು ಗಮನಿಸಿ ಸರಿಯಾದ ಆಪ್ ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.‌
  • ನಕಲಿ ಆಪ್ ನಲ್ಲಿ ಮಾಹಿತಿಯನ್ನು ನೀಡಿ ಮೋಸ ಹೋಗಬೇಡಿ.
  • ಈ ಆಪ್‌ ಜುಲೈ 1ರ ನಂತರ ಬಿಡುಗಡೆ ಮಾಡಬಹುದು.

ಈ ರೀತಿಯಾಗಿ ಗೃಹಲಕ್ಷ್ಮಿ ಆಪ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು ಅಥವಾ ವೆಬ್ಸೈಟ್ ಮೂಲಕ ಸಲ್ಲಿಸಬಹುದು. ಈಗಾಗಲೇ ವೆಬ್ಸೈಟ್ ಬಿಡುಗಡೆಯಾಗಿದೆ ಅದರಲ್ಲಿ ಗ್ರಹಲಕ್ಷ್ಮಿ ಅನ್ನುವ ಆಯ್ಕೆ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು.

Leave a comment