ರಾಜ್ಯಾದ್ಯಂತ ಉಚಿತ ಬಸ್‌ ಸಂಚಾರ ಪ್ರಾರಂಭ

ರಾಜ್ಯ ಸರ್ಕಾರದಿಂದ ಘೋಷಣೆಯಾದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಪ್ರಮುಖ ಯೋಜನೆ ಶಕ್ತಿ ಯೋಜನೆ, ಯೋಜನೆಯನ್ನು ಸರ್ಕಾರ ಜೂನ್ 11 ರಂದು ಅಂದರೆ ಇಂದು ಪ್ರಾರಂಭಗೊಳಿಸಲಿದ್ದು ರಾಜ್ಯದ ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು.

ಯಾವ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದು

ಸರ್ಕಾರಿ ಸಾರಿಗೆಗಳಾದಂತಹ ಕಲ್ಯಾಣ ಕರ್ನಾಟಕ ಸಾರಿಗೆ, ಬೆಂಗಳೂರು ಮಹಾನಗರ ರಸ್ತೆ ಸಾರಿಗೆ, ವಾಯು ಕರ್ನಾಟಕ ಸಾರಿಗೆ , ಈಶಾನ್ಯ ಕರ್ನಾಟಕ ಸಾರಿಗೆ, ಬಸಗಳಲ್ಲಿ ಮಾತ್ರ ಉಚಿತವಾಗಿ ಪ್ರಯಾಣ ಮಾಡಬಹುದು, ರಾಜಹಂಸ, ಐರಾವತ, ಸ್ಲೀಪರ್ ಕೋಚ್, ಎಸಿ ಬಸ್ಗಳು, ಪ್ರೈವೇಟ್ ಬಸ್ ಗಳು, ಇವುಗಳಲ್ಲಿ ಉಚಿತ ಇರುವುದಿಲ್ಲ.

ಒಂದು ಯೋಜನೆಯ ಜೂನ್ 11 ರಂದು ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಂಡೆಕ್ಟರ ಆಗಿ ಚಾಲನೆ ಮಾಡಲಿದ್ದು ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು.

ಉಚಿತ ಪ್ರಯಾಣ ಎಲ್ಲಿಂದ ಎಲ್ಲಿಯವರೆಗೆ

ಒಂದು ಯೋಜನೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಅನುಕೂಲವಾಗಲಿದ್ದು ಒಂದು ಉಚಿತ ಬಸ್ ಪ್ರಯಾಣ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸಬಹುದು. ಕರ್ನಾಟಕದಲ್ಲಿ ಮಾತ್ರ  ಉಚಿತ ಪ್ರಯಾಣ. ಮತ್ತು ರಾಜ್ಯದ ಹೊರಗಡೆ ಪ್ರಯಾಣ ಮಾಡಿದರೆ ಅದಕ್ಕೆ ಹಣ ಕೊಟ್ಟು ಟಿಕೆಟ್ ಪಡೆಯಬೇಕಾಗುತ್ತದೆ.

ಶಕ್ತಿ ಯೋಜನೆಗೆ ಅರ್ಹತೆ ಏನು?

ಯೋಜನೆಯು ರಾಜ್ಯದಲ್ಲಿ ಇರುವಂತಹ ಎಲ್ಲ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ತುಂಬಾ ಉಪಯೋಗವಾಗುತ್ತದೆ. ಆದರೆ ಉಚಿತವಾಗಿ ಪ್ರಯಾಣ ಮಾಡಲು ಕೆಲವು ಶರತುಗಳಿವೆ. ಅವುಗಳಲ್ಲಿ ಮೊದಲನೆಯದು ಒಂದು ಯೋಜನೆಗೆ ನೀವು ಅರ್ಹರಾಗಲು ನೀವು ಕರ್ನಾಟಕದವರಾಗಿರಬೇಕು, ಮತ್ತು ನಿಮ್ಮ ಹತ್ತಿರ ಆಧಾರ್ ಕಾರ್ಡ್ ದಂತಹ ಸರ್ಕಾರದಿಂದ ಪಡೆದಂತಹ ಐಡಿ ಕಾರ್ಡ್ ಬೇಕಾಗುತ್ತೆ, ಮತ್ತೆ ಹೊರ ರಾಜಕ್ಕೆ ಹೋಗುವಂತಹ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಸಿಗುವುದಿಲ್ಲ ಅದಕ್ಕೆ ನೀವು ದುಡ್ಡು ಕಟ್ಟಬೇಕಾಗುತ್ತದೆ.

ಉಚಿತ ಪ್ರಯಾಣಕ್ಕಾಗಿ ಯಾವ ದಾಖಲಾತಿಗಳು ಬೇಕು

ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ ಶಕ್ತಿ ಯೋಜನೆ, ಯೋಜನೆ ಅಡಿ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪಾಸ್ ಅಥವಾ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲು ನಿರ್ಧರಿಸಿದೆ. ಇದಕ್ಕೆ ಮೂರು ತಿಂಗಳ ಕಾಲಾವಕಾಶ ಬೇಕಿದೆ ಅಲ್ಲಿಯವರೆಗೂ ಎಲ್ಲ ಮಹಿಳೆಯರು ತಮ್ಮ ಬೇಕಾಗುವಂತಹ ದಾಖಲಾತಿಗಳು.  

  • ಆಧಾರ್ ಕಾರ್ಡ್
  • ವೋಟರ್ ಐಡಿ
  • ಡ್ರೈವಿಂಗ್ ಲೈಸೆನ್ಸ್

ಇತರೆ ಸರ್ಕಾರ ನೀಡಿರುವಂತಹ ಐಡಿ ಕಾರ್ಡ್ ಗಳು ಅದರಲ್ಲಿ ಭಾವಚಿತ್ರದ ಜೊತೆಗೆ ತಮ್ಮ ವಿಳಾಸ ಇರಬೇಕು.

ವಿದ್ಯಾರ್ಥಿನಿಯರಿಗೂ ಒಂದು ಯೋಜನೆ ಸಿಗುತ್ತಾ?

ಹೌದು ರಾಜ ಸರ್ಕಾರ ಘೋಷಣೆ ಮಾಡಿರುವ ಹಾಗೆ ಒಂದು ಯೋಜನೆ ರಾಜ್ಯದಲ್ಲಿರುವಂತಹ ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ. ಅದರಲ್ಲಿ ವಿದ್ಯಾರ್ಥಿನಿಯರು ಕೂಡ ಬರುತ್ತಾರೆ, ಇದರಿಂದ ಅವರಿಗೂ ತುಂಬಾ ಅನುಕೂಲವಾಗಲಿದೆ.

Leave a comment