ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಜೂನ್ 30ರವರೆಗೆ

ನಮಸ್ಕಾರ ಸ್ನೇಹಿತರೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಗುಡ್ ನ್ಯೂಸ್. ರಾಜ್ಯದಲ್ಲಿ ಇರುವಂತಹ ಎಲ್ಲ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಬಸ್ ಪಾಸ್ ಅರ್ಜಿಗಳನ್ನು ಬಿಡುಗಡೆ ಮಾಡಿದ್ದಾರೆ. ಅರ್ಜಿ ಸಲ್ಲಿಸಲು ಏನು ಮಾಡಬೇಕು ಮತ್ತೆ ಬೇಕಾಗುವಂತಹ ದಾಖಲಾತಿಗಳು ಯಾವವು. ಈ ಎಲ್ಲ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ರಾಜ್ಯದಲ್ಲಿ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಬಸ್ ಪಾಸ್ಗಾಗಿ ಅರ್ಜಿ ಸಲ್ಲಿಸುವವರೆಗೆ. ಜೂನ್ 30ರವರೆಗೆ ಉಚಿತವಾಗಿ ಪ್ರಯಾಣ ಮಾಡಬಹುದು ಅಂತ ಸರ್ಕಾರ ಆದೇಶ ಮಾಡಿದೆ

ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಸಲ್ಲಿಕೆ ಜೂನ್ 12ರಿಂದ ಪ್ರಾರಂಭವಾಗಿದ್ದು ಈ ಒಂದು ಅರ್ಜಿನ ಸಲ್ಲಿಸಬೇಕಾದರೆ ಸೇವಾ ಸಿಂಧು ಪೋರ್ಟಲ್ನಲ್ಲಿ  ಸಲ್ಲಿಸಬಹುದು. ಮತ್ತು ಸರ್ಕಾರ ವಿದ್ಯಾರ್ಥಿಗಳಿಗೆ ಜೂನ್ 15ರವರೆಗೂ ಉಚಿತವಾಗಿ ಪಯಣ ಮಾಡಬಹುದು ಅಂತ ಹೇಳಿದ್ರು. ಆದರೆ ಈಗ ಅದನ್ನ ಇನ್ನೂ 15 ದಿನ ಮುಂದೂಡಲಾಗಿದೆ ಯಾವುದೇ ಬಸ್ ಪಾಸ್ ಇಲ್ಲದೆ ವಿದ್ಯಾರ್ಥಿಗಳು ಜೂನ 30ರ ವರೆಗೆ ಉಚಿತವಾಗಿ ಪ್ರಯಾಣ ಮಾಡಬಹುದು. ಉಚಿತವಾಗಿ ಪ್ರಯಾಣ ಮಾಡಬೇಕಾದರೆ ವಿದ್ಯಾರ್ಥಿಗಳು ತಮ್ಮ ಶಾಲೆಯ ಪ್ರಸ್ತುತ ಸಾಲಿನ ಫೀ  ಕಟ್ಟಿರುವಂತಹ ದಾಖಲಾತಿ ಇರಬೇಕು.

ಅರ್ಜಿ ಸಲ್ಲಿಸುವುದು ಹೇಗೆ

ಅರ್ಜಿ ಸಲ್ಲಿಸಬೇಕಾದರೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ರಿಜಿಸ್ಟರ್ ಆಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

ವಿದ್ಯಾರ್ಥಿಗಳ ಬಸ್ ಪಾಸ್ ಗಾಗಿ ಬೇಕಾಗುವಂತಹ ದಾಖಲಾತಿಗಳು

  • ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ
  •  ಶಾಲೆಯಿಂದ ನೀಡಲಾದ ದೃಢೀಕರಣ ಪ್ರಮಾಣಪತ್ರ
  • ಜಾತಿ ಮತ್ತು ಅಧಾಯ ಪ್ರಮಾಣ ಪತ್ರ
  • ಪ್ರಸ್ತುತ ಸಾಲಿನ ಫೀ ರಿಸಿಪ್ಟ್  

ಎಲ್ಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಎಸಿ, ಎಸ್ಟಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಜಾತಿ ಮತ್ತು ಆಧಾಯ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಮತ್ತು ಸರಕಾರಿ ಶಾಲೆಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಫೀ ರಿಸಿಪ್ಟ್ ಅಗತ್ಯವಿರುವುದಿಲ್ಲ.

ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಕಡ್ಡಾಯ

ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ, ಸೇವಾ ಸಿಂಧು ಪೋರ್ಟಲ್ಲಿ ರಿಜಿಸ್ಟರ್ ಮಾಡಬೇಕಾದರೆ ಆಧಾರ್ ಕಾರ್ಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ನಂಬರ್ಗೆ ಓಟಿಪಿ ಬರುತ್ತೆ. ಆ ಒಂದು ಓಟಿಪಿಯಿಂದ ರಿಜಿಸ್ಟರ್ ಮಾಡಬೇಕಾಗುತ್ತದೆ. ಹಾಗಾಗಿ ನಿಮ್ಮ ಒಂದು ಮೊಬೈಲ್ ನಂಬರಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ. ಲಿಂಕ್ ಇಲ್ಲದೆ ಹೋದರೆ ನಿಮಗೆ ರಿಜಿಸ್ಟರ್ ಮಾಡೋದಿಕ್ಕೆ ಆಗಲ್.

ವಿದ್ಯಾರ್ಥಿಗಳ ಬಸ್ ಪಾಸ್ ಅರ್ಜಿ ಸಲ್ಲಿಸುವಾಗ ತಮ್ಮ ಪ್ರಸ್ತುತ  ವಿಳಾಸದ ವಿವರ ಸಲ್ಲಿಸಬೇಕು ಮತ್ತು ಎಲ್ಲಿಂದ ಎಲ್ಲಿಯವರೆಗೆ  ಪ್ರಯಾಣ ಮಾಡಬೇಕು ಅಂತ ಮಾಹಿತಿ ಸಲ್ಲಿಸಬೇಕು.

Leave a comment