APL ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ

ಎಪಿಎಲ್ ರೇಷನ್ ಕಾರ್ಡ್ ಇದು ಬಡತನ ರೇಖೆ ಗಳಿಗಿಂತ ಮೇಲೆ ಇರುವ ಜನರಿಗೆ ಇದು ತುಂಬಾ ಅವಶ್ಯಕತೆ ಇದೆ. ಇದರ ಒಂದು ಪ್ರಯೋಜನ ಕರ್ನಾಟಕದಲ್ಲಿ ಯಾವುದಾದರೂ ಯೋಜನೆಗೆ ಉಪಯೋಗವಾಗುವಂತಹ ಒಂದು ಮಹತ್ವವಾದ ಕಾರ್ಡಗಿದೆ. ಒಂದು ರೇಷನ್ ಕಾರ್ಡ್ ಹೇಗೆ ಅರ್ಜಿ ಸಲ್ಲಿಸಬೇಕು ಅಂದ್ರೆ ಒಂದು ಲೇಖನವನ್ನು ಪೂರ್ತಿಯಾಗಿ ಓದಿ.

ಎಪಿಎಲ್ ರೇಷನ್ ಕಾರ್ಡ್ ಯಾರಿಗೆ ಮುಖ್ಯವಾಗಿರುತ್ತೆ

ಎಪಿಎಲ್  ಕಾರ್ಡ್ ಇದು ಶ್ರೀಮಂತರಿಗೆ ಸರಕಾರಿ ನೌಕರರಿಗೆ ಮತ್ತೆ ಇನ್ಕಮ್ ಟ್ಯಾಕ್ಸ್ ತುಂಬುವಂತಹ ಜನರಿಗೆ ಇದು ಅವಶ್ಯಕತೆ ಇರುವುದು. ಎಪಿಎಲ್ ಪಡಿತರ ಚೀಟಿ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳನ್ನು ಪಡೆಯಲು ಗುರುತಿನ ಮತ್ತು ಅರ್ಹತೆಯ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸೂಕ್ತ ದಾಖಲಾತಿಗಳನ್ನ ಒದಗಿಸಬೇಕು.

ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು

ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬೇಕಾದರೆ ಮೊದಲಿಗೆ ನೀವು ಕರ್ನಾಟಕದವರಾಗಿರಬೇಕು, ನಿಮ್ಮ ಆಧಾರ್ ಕಾರ್ಡ್ ಇರಬೇಕು, ಆಧಾರ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಇರಬೇಕು, ಒಂದು ಅರ್ಜಿ ಸಲ್ಲಿಸಬೇಕಾದರೆ ಒಟಿಪಿ ಮುಖಾಂತರ ಸಲ್ಲಿಸಬಹುದು ಅಥವಾ ಬಯೋಮೆಟ್ರಿಕ್ ನಿಂದ ಸಲ್ಲಿಸಬಹುದು.

ಎಪಿಎಲ್ ರೇಷನ್ ಕಾರ್ಡ್ ನಿಂದ ಯಾವ ಯೋಜನೆ ಸಿಗುತ್ತೆ

ಒಂದು ರೇಷನ್ ಕಾರ್ಡ್ ಇದ್ದರೆ ನಿಮಗೆ ಬಹಳ ಯೋಜನೆಗಳು ಸಿಗೋದಿಲ್ಲ ಏಕೆಂದರೆ ಎಲ್ಲ ಸರ್ಕಾರಿ ಯೋಜನೆಗಳು ಬಡವರಿಗೆ ಮೀಸಲಿರುತ್ತೆ ಅಂತಹ ಯೋಜನೆಗಳು ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಸಿಗುತ್ತೆ. ಆದರೆ ಕೆಲವೊಂದು ಸರಕಾರಿ ಯೋಜನೆಗಳು ಎಪಿಎಲ್ ಕಾರ್ಡ್ಗೆ ಅನ್ವಯಿಸುತ್ತೆ ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತಹ ಯೋಜನೆ ಅದುಗೃಹಲಕ್ಷ್ಮಿ ಯೋಜನೆ, ಯೋಜನೆಗೆ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಬೇಕಾಗುತ್ತೆ ಅದು ಎಪಿಎಲ್ ಆದರೂ ನಡೆಯುತ್ತೆ, ಬಿಪಿಎಲ್ ಆದ್ರೂ ನಡೆಯುತ್ತೆ.

ಗೃಹಲಕ್ಷ್ಮಿ ಯೋಜನೆಗೆ ಎಪಿಎಲ್ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುತ್ತೆ ಏಕೆಂದರೆ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರು ಅಂದರೆ ಕುಟುಂಬದ ಯಜಮಾನಿ ಯಾರಿರುತ್ತಾರೆ ಎಂದು ಸ್ಪಷ್ಟವಾಗಿ ಇರುತ್ತದೆ ಆದಕಾರಣ ಎಪಿಎಲ್ ರೇಷನ್ ಕಾರ್ಡ್ ಅದು ಕೂಡ ಒಂದು ಯೋಜನೆಗೆ ತುಂಬಾ ಉಪಯುಕ್ತವಾಗಿದೆ.

ಎಪಿಎಲ್ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ

ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬೇಕಾದರೆ ನೀವು ಅಧಿಕೃತ ಆಹಾರ ಇಲಾಖೆಯ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲವಾದರೆ ಸೇವಕೇಂದ್ರಕ್ಕೆ ಭೇಟಿ ನೀಡಿ ಅರ್ಜಿನ ಸಲ್ಲಿಸಬಹುದು.

ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Leave a comment