ಯುವನಿಧಿ ಯೋಜನೆ ಎಲ್ಲ ಪದವೀಧರರಿಗೆ 3000 ರೂಪಾಯಿಗಳು ಮತ್ತು ಡಿಪ್ಲೋಮಾ ಪದವೀಧರರಿಗೆ 1500 ರೂಪಾಯಿಗಳು

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯಲ್ಲಿ ಎಲ್ಲ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಮತ್ತು ಡಿಪ್ಲೋಮಾ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ಯೋಜನೆಯಿಂದ ಅನುಕೂಲವಾಗಲಿದೆ.

ಯುವನಿಧಿ ಯೋಜನೆ ಯಾವಾಗ ಅನ್ವಯಿಸುತ್ತೆ

ಯುವನಿಧಿ ಯೋಜನೆಯು ಪದವೀಧರರಿಗೆ ಪದವಿ ಮುಗಿದ ನಂತರ ಪ್ರತಿ ತಿಂಗಳಿಗೆ 3000 ರಂತೆ 24 ತಿಂಗಳವರೆಗೆ ಒಂದು ಯೋಜನೆಯಿಂದ ಹಣ ಸಿಗುತ್ತೆ ಮತ್ತೆ ಡಿಪ್ಲೋಮಾ ಮುಗಿದ ನಂತರ 1500ರಂತೆ 24 ತಿಂಗಳದ ವರೆಗೆ ಒಂದು ಯೋಜನೆಯಿಂದ ಅವರಿಗೆ ಕೂಡ ಹಣ ಸಿಗುತ್ತೆ. ಒಂದು ವೇಳೆ 12 ತಿಂಗಳಲ್ಲಿ ಪದವೀಧರರಿಗೆ ಖಾಸಗಿ ಆಗಲಿ ಅಥವಾ ಸರಕಾರಿ ಹುದ್ದೆ ದೊರೆತರೆ ಅಂತಹ ಅಭ್ಯರ್ಥಿಗಳಿಗೆ ಒಂದು ಯುವ ನಿಧಿ ಯೋಜನೆ ಸ್ಟಾಪ್ ಮಾಡಲಾಗುವುದು. ಡಿಪ್ಲೋಮಾ ಪದವೀಧರರಿಗೂ ಅನ್ವಯಿಸುತ್ತೆ.

ಯಾವ ಯಾವ ಪದವಿದ ವರೆಗೆ ಇವನಿಗೆ ಯೋಜನೆ ಸಿಗುತ್ತೆ

ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ ಎಲ್ಲಾ ಪದವಿದಾರರಿಗೆ ಅಂದರೆ ಬಿಎ, ಬಿಕಾಂ, ಬಿಸಿಎ, ಬಿಎಸ್ಸಿ, ಬಿಬಿಎ, ಎಂಎ, ಎಂ.ಎಸ್.ಸಿ, ಎಂಸಿಎ, ಬಿಇ, ಎಂಇ ಮತ್ತೆ ಎಲ್ಲ ಪ್ರೊಫೆಷನಲ್ ಕೋರ್ಸ್ ಎಲ್ಲ ಪದವಿ ಕೂಡ ಒಂದು ಯೋಜನೆ ಅಡಿಯಲ್ಲಿ ಬರುತ್ತೆ .

ಒಂದು ಯೋಜನೆ ಯಾವಾಗನಿಂದ ಪ್ರಾರಂಭ

ರಾಜ್ಯ ಸರ್ಕಾರ ತೀರ್ಮಾನಿಸಿದ ಹಾಗೆ ಯುವನಿಧಿ ಯೋಜನೆ 2022-23ನೇ ಸಾಲಿನಲ್ಲಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಭವಿಷ್ಯಕ್ಕಾಗಿ ಅವರ ಕೆಲಸ ಸಿಗುವವರೆಗೂ ಗರಿಷ್ಠ 24 ತಿಂಗಳವರೆಗೆ ಪ್ರತಿ ತಿಂಗಳು 3000 ರೂಪಾಯಿಗಳು ನೇರವಾಗಿ ಅವರ ಖಾತೆಗೆ ಜಮಾ ಆಗುತ್ತೆ. ಅರ್ಜಿ ಸಲ್ಲಿಸಿದ ಮರುಕ್ಷಣ ಒಂದು ಯೋಜನೆ ಪ್ರಾರಂಭ ಆಗುತ್ತೆ., ನೀವು ಅರ್ಜಿ ಹಾಕಿದ ಕ್ಷಣದಿಂದ 24 ತಿಂಗಳವರೆಗೆ ಕೆಲಸ ಸಿಗುವವರೆಗೆ ನಿಮಗೆ ತಿಂಗಳಿಗೆ 3000 ಹಣ ಸಿಗಲಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಯೋಜನೆಯು ಇನ್ನೂ ಕೆಲವೇ ದಿನಗಳಲ್ಲಿ ಪ್ರಾರಂಭ ಮಾಡಲಾಗುತ್ತೆ ಅಂತ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಒಂದು ಯೋಜನೆಗೆ ಏನೆಲ್ಲಾ ಅರ್ಹತೆ ಇರಬೇಕು

·         ಪದವಿ ಮುಗಿಸಿರೋ ಅಭ್ಯರ್ಥಿ ಕರ್ನಾಟಕ ದವರಾಗಿರಬೇಕು ಮತ್ತು ಪದವಿ ಕರ್ನಾಟಕದಲ್ಲಿ ಮುಗಿಸಿರಬೇಕು

·         ಪದವಿಯಲ್ಲಿ ಪಾಸ್ ಆಗಿರಬೇಕು

·         ಪದವಿ ಮುಗಿಸಿರೋ ಎಲ್ಲ ದಾಖಲೆಗಳನ್ನು ಹೊಂದಿರಬೇಕು

·         ನಿರುದ್ಯೋಗಿ ಪ್ರಮಾಣ ಪತ್ರ ಪಡೆದಿರಬೇಕು

·         ಆಧಾರ್ ಕಾರ್ಡ್ ಇರಬೇಕು

·         ಪಾನ್ ಕಾರ್ಡ್ ಬೇಕಾಗುತ್ತೆ

·         ಮತ್ತೆ ಬ್ಯಾಂಕ್ ಪಾಸ್ ಬುಕ್

·         ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿರಬೇಕು

·         ನಿಮ್ಮ ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್ ಇರಬೇಕು

       ಈ ಎಲ್ಲ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ನೀವು ಒಂದು ಅರ್ಜಿ ಸಲ್ಲಿಸಬೇಕಾದರೆ ಎಲ್ಲ ದಾಖಲಾತಿಗಳನ್ನ ಹೊಂದಿಸಬೇಕಾಗುತ್ತದೆ.

ಒಂದು ಯೋಜನೆಯನ್ನು ಯಾವ ರೀತಿ ಅರ್ಜಿ ಸಲ್ಲಿಸಬೇಕು

ಈಗಾಗಲೇ ರಾಜ್ಯ ಸರ್ಕಾರ ತೀರ್ಮಾನಿಸಿದ ಪ್ರಕಾರ ಎಲ್ಲಾ ಪದವಿದಾರರು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕು ಯೋಜನೆಯು ಆನ್ಲೈನ್ ನಲ್ಲಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಒಂದು ಯೋಜನೆ ಅನ್ವಯಿಸುತ್ತೆ. ಒಂದು ವೇಳೆ ಆನ್ಲೈನಲ್ಲಿ ಒಂದು ಯೋಜನೆ ಅರ್ಜಿಯನ್ನು ಸಲ್ಲಿಸದಿದ್ದರೆ ನಿಮಗೆ ಯೋಜನೆ ಸಿಗೋದಿಲ್ಲ.

Leave a comment