ರೈತರಿಗೆ 5 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ

ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರ 2023-24ನೇ ಸಾಲಿನ ಬಜೆಟ್ ನಲ್ಲಿ ರೈತರಿಗೆ ಒಂದು ಬಂಪರ್ ಕೋಡಿ ಅಂತಾನೆ ಹೇಳಬಹುದು. ಒಂದು ಬಜೆಟ್ ನಲ್ಲಿ ರಾಜ್ಯ ಸರಕಾರ ರೈತರಿಗೆ ಬಡ್ಡಿ ಇಲ್ಲದೆ 5 ಲಕ್ಷದವರೆಗೂ ಸಾಲ ಮತ್ತು ದೀರ್ಘಾವಧಿ ಸಾಲದ ಮಿತಿ ಏರಿಕೆ ಮತ್ತು ಗೋಧಾಮು ನಿರ್ಮಾಣ ಮತ್ತು ಇನ್ನೂ ಹಲವಾರು ಯೋಜನೆಗಳು ರೈತರಿಗೋಸ್ಕರ ಒಂದು ಬಜೆಟ್ ನಲ್ಲಿ ಮಂಡನೆ ಮಾಡಿದರೆ. ಅದರ ಒಂದು ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ರಾಜ ಸರ್ಕಾರ ಒಂದು ಬಜೆಟ್ ನಲ್ಲಿ ರೈತರಿಗೆ ಒಂದು ತುಂಬಾ ಅನುಕೂಲವಾಗುವ ರೀತಿಯಲ್ಲಿ ಅನುದಾನ ನೀಡಿದ್ದಾರೆ ಅಂತ ಹೇಳಬಹುದು. ಮತ್ತು ರೈತರಿಗೆ ದೀರ್ಘಾವಧಿ ಸಾಲದ ಮಿತಿ ಮೊದಲು ಹತ್ತು ಲಕ್ಷದವರೆಗೆ ಇತ್ತು ಆದರೆ ಇವಾಗ ಅದನ್ನ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅಂದರೆ ರೈತರು ದೀರ್ಘಾವಧಿಕಾಲ ಸಾಲವನ್ನು ಹದಿನೈದು ಲಕ್ಷದವರೆಗೆ ಪಡೆಯಬಹುದು ಅದು ಶೇಕಡ ಮೂರರ ಬಡ್ಡಿ ದರದಲ್ಲಿ.

ರೈತರಿಗೆ ಬಡ್ಡಿ ಇಲ್ಲದೆ ಸಾಲ

ರಾಜ್ಯದ ಒಂದು ರೈತ ಬಾಂಧವರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ 2023-24ನೇ ಸಾಲಿನ ಬಜೆಟ್ ನಲ್ಲಿ ರೈತರಿಗೆ 5 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ ಪಡೆಯಬಹುದು. ರೈತರು ಸಾಲ ಪಡೆದಾಗ 5 ಲಕ್ಷದವರೆಗೂ ಬಡ್ಡಿ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಬಡ್ಡಿ ಇಲ್ಲದೆ ಅಸಲು ಹಿಂತಿರುಗಿಸ ಬೇಕಾಗುತ್ತೆ. ಮತ್ತು 5 ಲಕ್ಷದ ಮೇಲ್ಪಟ್ಟ ಸಾಲಗಳಿಗೆ ಶೇಕಡ ಮೂರರಷ್ಟು ಬಡ್ಡಿ ಪಾವತಿ ಮಾಡಬೇಕಾಗುತ್ತೆ.

ರಾಜ್ಯದ ರೈತರಿಗೆ ಗೋದಾಮು ನಿರ್ಮಾಣಕ್ಕೆ ಸಹಾಯಧನ

ರಾಜ್ಯದಲ್ಲಿನ ರೈತರಿಗೆ ಮತ್ತೊಂದು ಕೊಡುಗೆ ಅದು ಗೋದಾಮು ನಿರ್ಮಾಣಕ್ಕೆ ಶೇಕಡ 7ರಷ್ಟು ಸಹಾಯಧನ ಸಿಗಲಿದೆ. ಇದರಲ್ಲಿ ಸರ್ಕಾರದಿಂದ ಗೋದಾಮು ನಿರ್ಮಿಸಲು ಶೇಕಡ 7 ರಷ್ಟು ಸಹಾಯಧನ ಸಿಗುತ್ತದೆ. ಅದನ್ನು ರೈತರ ಸದುಪಯೋಗ ಮಾಡಿಕೊಳ್ಳಬಹುದು.

ರೈತರ ವಾಹನ ಕರೆದಿಗೆ ಸಾಲ

  • ಮಲೆನಾಡು ಭಾಗದಲ್ಲಿ ಕೃಷಿ ಉತ್ಪನ್ನ ಸಾಗಾಟಕ್ಕೆ ವಾಹನ ಖರೀದಿ ಮಾಡಲು ಸರ್ಕಾರದ ಕಡೆಯಿಂದ ಸಹಾಯಧನ ಸಿಗಲಿದೆ.
  • ಮಲೆನಾಡು ಭಾಗದಲ್ಲಿ ಕೃಷಿ ಉತ್ಪನ್ನ ಸಾಗಾಟಕ್ಕೆ ಪಿಕಪ್ ವಾಹನ ಖರೀದಿ ಮಾಡಲು 7 ಲಕ್ಷದವರೆಗೆ ಸರಕಾರದಿಂದ ಸಾಲ ಸಿಗಲಿದೆ ಮತ್ತು ವಾಹನ ಖರೀದಿಗೆ ಶೇಕಡ 4ರ ಬಡ್ಡಿದರದಲ್ಲಿ ಸಾಲ ಪಡೆಯಬಹುದು.
  • ಒಂದು ಸಾಲ ಸರ್ಕಾರದ ವತಿಯಿಂದ ನಿಮಗೆ ಸಿಗುತ್ತದೆ. ಇನ್ನು ಹೆಚ್ಚಿನ ಒಂದು ಮಾಹಿತಿಗಾಗಿ ಹತ್ತಿರವಿರುವಂತಹ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ರಾಜ್ಯದ ಕೋಲ್ಡ್ ಸ್ಟೋರೇಜ್ ಸ್ಥಾಪನೆ

  • ರಾಜ್ಯದ ರೈತರಿಗೆ ಇನ್ನೊಂದು ಬಂಪರ ಕೋಡುಗೆ ಅಂತಾನೆ ಹೇಳಬಹುದು ಅದು ಯಾವುದಪ್ಪ ಅಂತ ಅಂದ್ರೆ.
  • ರಾಜ್ಯದ 50 ಕಡೆ ಮಿನಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲು ಸರ್ಕಾರ ಆದೇಶ ಮಾಡಿದೆ. ಅದು 2023-24ನೇ ಸಾಲಿನಲ್ಲಿ ಬಜೆಟ್ ಮಂಡನೆಯಲ್ಲಿ ಒಂದು ಆದೇಶ ಮಾಡಿದೆ ಅಂತಾನೆ ಹೇಳಬಹುದು. ರಾಜ್ಯದಲ್ಲಿ 50 ಕಡೆ ಮಿನಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲು ಆದೇಶ ಮಾಡಿದೆ.
  • ರೀತಿಯಾಗಿ ರಾಜ್ಯ ಸರ್ಕಾರ 202324ನೇ ಸಾಲಿನ ಬಜೆಟ್ ನಲ್ಲಿ ಕೃಷಿಗೋಸ್ಕರ ಕೃಷಿ ಭಾಗ್ಯ ಯೋಜನೆ 100 ಕೋಟಿ ವೆಚ್ಚದಲ್ಲಿ ಮರು ಜಾರಿ ಮಾಡಿದ್ದಾರೆ.

ರೇಷ್ಮೆದಾರರಿಗೂ ಆದ್ಯತೆ

ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 5 ಲಕ್ಷದವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ರೇಷ್ಮೆ ಬೆಳೆಯುವ ರೈತರಿಗೆ ಕೂಡ 5 ಲಕ್ಷದವರೆಗೂ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದೆ.

ಅನುಗ್ರಹ ಯೋಜನೆ

ಜಾನುವಾರಗಳ ಆಕಸ್ಮಿಕ ಸಾವಿನ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆಗೆ ಮರು ಜಾರಿ. ರಾಜ್ಯದಲ್ಲಿನ ಜಾನುವಾರಗಳಿಗೆ ಆಕಸ್ಮಿಕವಾಗಿ ಸಾವಿನ ಸಂಕಷ್ಟ ಎದುರಾದರೆ ಅದರ ಒಂದು ನಿವಾರಣೆಗಾಗಿ ರಾಜ್ಯ ಸರ್ಕಾರ ಅನುಗ್ರಹ ಯೋಜನೆಯನ್ನು ಮರು ಜಾರಿ ಮಾಡಿದ್ದಾರೆ, ಇದರಿಂದ ಎಲ್ಲ ಒಂದು ರೈತರಿಗೆ ಜಾನುವಾರಗಳ ಆಕಸ್ಮಿಕ ಸಾವಿನ ಸಂಕಷ್ಟದಲ್ಲಿ ಸಿಲುಕಿರುವಂತಹ ರೈತರಿಗೆ ಒಂದು ಅನುಗ್ರಹ ಯೋಜನೆಯಿಂದ ತುಂಬಾ ಅನುಕೂಲವಾಗಲಿದೆ. ಮತ್ತು ಇದನ್ನು ಯಾವ ರೀತಿ ಪಡೆಯಬಹುದು ಅಂತ ನೀವು ಹತ್ತಿರವಿರುವಂತಹ ಕೇಂದ್ರಗಳಿಗೆ ಹೋಗಿ ಭೇಟಿ ನೀಡಿ ಮಾಹಿತಿನ ಪಡೆಯಬಹುದು.

Leave a comment