ಶಿಕ್ಷಣ ಕ್ಷೇತ್ರದ ಪ್ರಗತಿಗೆ ರಾಜ್ಯ ಸರ್ಕಾರದಿಂದ ಆದ್ಯತೆ
- ಶಾಲೆ ಕಾಲೇಜುಗಳ ದುರಸ್ತಿಗೆ ಕೊಠಡಿಯ ನಿರ್ಮಾಣಕ್ಕೆ ಮೂಲ ಸೌಕರ್ಯ ವ್ಯವಸ್ಥೆಗೆ 850 ಕೋಟಿ.
- ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡಲು 850 ಕೋಟಿ ವೆಚ್ಚ.
- ರಾಷ್ಟ್ರೀಯ ಶಿಕ್ಷಣ ನೀತಿ ಎನ್.ಇ.ಪಿ NEP ರದ್ದು.
- ರಾಜ್ಯದ ವಿದ್ಯಾರ್ಥಿಗಳಿಗೆ ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಒಂದು ದಿನಕ್ಕೆ ಮಕ್ಕಳಿಗೆ ಮೊಟ್ಟೆ ನೀಡಲಾಗುವುದು.
ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 30 ಕೋಟಿ
- ರಾಜ್ಯದ 67 ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು 30 ಕೋಟಿ
ರೂ ವೆಚ್ಚದಲ್ಲಿ 6 ರಿಂದ 12ನೇ ತರಗತಿವರೆಗೆ ಇಂಟಿಗ್ರೇಟೆಡ್ ಶಾಲೆಗಳನ್ನಾಗಿ ಉನ್ನತೀಕರಣ 13,000 ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಾಗಲಿದೆ. - 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿಯನ್ನು 23 ಕೋಟಿ ರೂ ವೆಚ್ಚದಲ್ಲಿ ದ್ವಿಗುಣಗೊಳಿಸಲು ಕ್ರಮ. ಹೆಚ್ಚುವರಿಯಾಗಿ 12,500 ವಿದ್ಯಾರ್ಥಿಗಳಿಗೆ ಅವಕಾಶ. ಹೊಸದಾಗಿ 10 ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭ.
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಗೆ 75 ಕೋಟಿ ರೂ ಅನುದಾನ.
- ಕೇಂದ್ರ ಸರಕಾರ ಸ್ಥಗಿತಗೊಳಿಸಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆಯನ್ನು ರಾಜ್ಯ ಸರ್ಕಾರ ಮುಂದುವರೆಸಲು 60 ಕೋಟಿ ರೂ ಅನುದಾನ.
ರಾಜ್ಯ ಬಜೆಟ್ ನಲ್ಲಿ ಯುವನಿಧಿ ಹೆಚ್ಚು ಆದ್ಯತೆ
- ರಾಜ್ಯ ಸರ್ಕಾರದಿಂದ 2023-24ನೇ ಸಾಲಿನ ಬಜೆಟ್ ನಲ್ಲಿ ಪದವಿ ಮುಗಿಸಿರುವ ಅಭ್ಯರ್ಥಿಗಳಿಗೆ ಕೆಲಸ ಸಿಗುವವರೆಗೂ ನಿರುದ್ಯೋಗ ಬತ್ಯ ಸಿಗಲಿದೆ.
- 2023 ರಲ್ಲಿ ಪದವಿ ಪಡೆದು ಆರು ತಿಂಗಳ ವರೆಗೂ ಉದ್ಯೋಗ ಲಭಿಸದ ಯುವಜನರಿಗೆ ಎರಡು ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಬತ್ಯ.
- ರಾಜ್ಯದ ವಿದ್ಯಾರ್ಥಿಗಳು ಪದವಿ ಮುಗಿಸಿದ ನಂತರ ಆರು ತಿಂಗಳವರೆಗೆ ಕೆಲಸ ಸಿಗದೇ ಇರುವಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 3000 ನಿರುದ್ಯೋಗ ಬತ್ಯ ಸಿಗಲಿದೆ.
- ಡಿಪ್ಲೋಮಾ ಮುಗಿಸಿರುವ ಪದವೀಧರರಿಗೆ ಪ್ರತಿ ತಿಂಗಳು 1500 ನಿರುದ್ಯೋಗ ಬತ್ಯ ಸಿಗಲಿದೆ.
- ರಾಜ್ಯ ಸರ್ಕಾರ ಸುಮಾರು 3, 70,000 ಯುವ ಜನರಿಗೆ ಈ ಒಂದು ಯೋಜನೆಯಿಂದ ಲಾಭ ಸಿಗಲಿದೆ.
- ಯುವನಿಧಿ ಯೋಜನೆಗೆ ಶೀಘ್ರದಲ್ಲೇ ಅರ್ಜಿ ಪ್ರಾರಂಭವಾಗಲಿದ್ದು ಅರ್ಹತೆ ಇರುವ ಅಭ್ಯರ್ಥಿಗಳು ಈ ಒಂದು ಯೋಜನೆಯಿಂದ ಲಾಭ ಪಡೆಯಬಹುದು.