ನಮಸ್ಕಾರ ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯ ಯೋಜನೆಯದ ಅನ್ನಭಾಗ್ಯ ಯೋಜನ. ಈ ಒಂದು ಯೋಜನೆ ಅಡಿಯಲ್ಲಿ ಬರುವಂತಹ ಪ್ರತಿ ಕುಟುಂಬಕ್ಕೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಜೊತೆಗೆ 170 ಹಣ ಸಿಗುತ್ತೆ. ಈ ಹಣ ಯಾವ ರೀತಿ ಸಿಗುತ್ತೆ ಮತ್ತೆ ಯಾವ ಬ್ಯಾಂಕಿಗೆ ಜಮಾ ಆಗುತ್ತೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬರುವಂತಹ ಪ್ರತಿಯೊಂದು ಕುಟುಂಬಕ್ಕೆ 5 ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ದುಡ್ಡು ಸಿಗುತ್ತೆ ಇದನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಇರಬೇಕಾಗುತ್ತೆ
ಅನ್ನಭಾಗ್ಯಹನ ಹಣ ಸ್ಟೇಟಸ್ ಚೆಕ್ ಮಾಡುವಂತಹ ವೆಬ್ಸೈಟ್ ಲಿಂಕ್
ಅನ್ನಭಾಗ್ಯ ಹಣ ಯಾರಿಗೆ ಸಿಗುತ್ತೆ
ಅನ್ನಭಾಗ್ಯ ಯೋಜನೆಯ ಹಣ ಬಿಪಿಎಲ್ ರೇಷನ್ ಕಾರ್ಡ್ ಇರುವಂತಹ ಕುಟುಂಬಕ್ಕೆ ಸಿಗುತ್ತೆ ಮತ್ತು ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರಿಗೆ ಮನೆಯ ಯಜಮಾನ ಅಥವಾ ಯಜಮಾನಿಗೆ ನೇರವಾಗಿ ಡಿಬಿಟಿ ಮೂಲಕ ಅವರ ಬ್ಯಾಂಕಗೆ ಜಮಾ ಆಗುತ್ತೆ.
ಅನ್ನಭಾಗ್ಯ ಹಣ ಪಡೆಯಲು ಏನು ಮಾಡಬೇಕು
- ಅನ್ನಭಾಗ್ಯ ಹಣ ಪಡೆಯಲು ಮೊದಲು ಮನೆಯ ಮುಖ್ಯಸ್ಥರಾಗಿರಬೇಕು ಮನೆಯ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಇರಬೇಕು ಮತ್ತು ನಿಮ್ಮ ಒಂದು ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಇರಬೇಕು.
- ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಹೋದಲ್ಲಿ ನಿಮಗೆ ಈ ಒಂದು ಯೋಜನೆಯಡಿಯಲ್ಲಿ ಹಣ ಸಿಗುವುದಿಲ್ಲ.
- ನಿಮ್ಮ ಒಂದು ರೇಷನ್ ಕಾರ್ಡ್ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಹೋದಲ್ಲಿ ಈ ಒಂದು ಯೋಜನೆಯಿಂದ ಹಣ ಸಿಗುವುದಿಲ್ಲ.
- ಅದಕ್ಕೋಸ್ಕರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು. ಲಿಂಕ್ ಮಾಡಿಸಿದ ನಂತರ ಈ ಒಂದು ಯೋಜನೆಯಲ್ಲಿ ಹಣ ಸಿಗುತ್ತೆ ನೇರವಾಗಿ ಡಿಬಿಟಿ ಮೂಲಕ ನಿಮಗೆ ವರ್ಗಾವಣೆ ಆಗುತ್ತೆ.
ಅನ್ನಭಾಗ್ಯ ಹಣ ಯಾವ ಖಾತೆಗೆ ಜಮಾ ಆಗಿದೆ ಅಂತ ಚೆಕ್ ಮಾಡುವುದು ಹೇಗೆ
- ಅನ್ನಭಾಗ್ಯಹನ ಹಣ ಜಮಾ ಆಗಿದೆ ಅಂತ ಚೆಕ್ ಮಾಡುವುದು ಹೇಗೆ ಎಂದರೆ ಮೊದಲಿಗೆ ಆಹಾರ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ https://ahara.kar.nic.in/status2/status_of_dbt_new.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಡಿಬಿಟಿ ಸ್ಟೇಟಸ್ ಚೆಕ್ ಮಾಡುವಂತಹ ವೆಬ್ಸೈಟ್ ಓಪನ್ ಆಗುತ್ತೆ ನಂತರ ಪ್ರಸ್ತುತ ವರ್ಷ ಆಯ್ಕೆ ಮಾಡಿ.
- ಕೆಳಗಡೆ ಪ್ರಸ್ತುತ ತಿಂಗಳು ಆಯ್ಕೆ ಮಾಡಿ ನಂತರ ಕೆಳಗಡೆ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಎಂಟರ್ ಮಾಡಿ.
- ನಂತರ ಕೆಳಗಡೆ ಕ್ಯಾಪ್ಚಾ ಎಂಟರ್ ಮಾಡಿ ನಂತರ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮ್ಮ ಅನ್ನಭಾಗ್ಯ ಹನ ಜಮಾ ಆಗಿದೆ ಅಂತ ತಿಳಿದುಕೊಳ್ಳಬಹುದು. ಕೆಳಗಡೆ ನಿಮ್ಮ ಡಿವಿಟಿ ಸ್ಟೇಟಸ್ ಬರುತ್ತೆ.
- ಅದರಲ್ಲಿ ಕುಟುಂಬ ಮುಖ್ಯಸ್ಥರ ಹೆಸರು ಮತ್ತು ಅವರ ಒಂದು ಆಧಾರ್ ಕಾರ್ಡ್ ನಂಬರ್ ಮತ್ತು ನಿಮ್ಮ ಒಂದು ರೇಷನ್ ಕಾರ್ಡ್ ನಲ್ಲಿ ಎಷ್ಟು ಜನ ಇದ್ದಾರೆ ಮತ್ತು ನಿಮ್ಮ ಒಂದು ರೇಷನ್ ಕಾರ್ಡ್ ಬಿ.ಪಿ.ಎಲ್ ಅಥವಾ ಎ.ಪಿ.ಎಲ್ ಅಂತ ಗೊತ್ತಾಗುತ್ತೆ. ನಂತರ ಎಷ್ಟು ಅಕ್ಕಿ ಸಿಗುತ್ತೆ ಎಷ್ಟು ಕೆಜಿ ಅಕ್ಕಿ ಸಿಗುತ್ತೆ ಅಂತ ಗೊತ್ತಾಗುತ್ತೆ. ನಂತರ ಎಷ್ಟು ಹಣ ಜಮಾ ಆಗುತ್ತೆ ಅಂತ ನೋಡಬಹುದು.
- ಮತ್ತು ಅದರ ಕೆಳಗಡೆ ಪೇಮೆಂಟ್ ಮಾಹಿತಿ ಸಿಗುತ್ತೆ ಅದರಲ್ಲಿ ರೇಷನ್ ಕಾರ್ಡ್ ಮೆಂಬರ್ ಹೆಸರು ಇರುತ್ತೆ ಮತ್ತು ಅವರ ಬ್ಯಾಂಕ್ ಅಕೌಂಟ್ ನಂಬರ್ ಕೊಡ ಇರುತ್ತೆ.
- ಬ್ಯಾಂಕ್ ಹೆಸರು ಮತ್ತು ನಿಮ್ಮ ಖಾತೆಗೆ ಯಾವ ಒಂದು ದಿನಾಂಕದಂದು ಹಣ ಜಮಾ ಆಗಿದೆ ಅಂತ ನೋಡಬಹುದು. ಮತ್ತು ಎಷ್ಟು ಹಣ ಜಮಾ ಆಗಿದೆ ಅಂತ ಸಂಪೂರ್ಣವಾಗಿ ಮಾಹಿತಿ ನೋಡಬಹುದು. ಈ ರೀತಿಯಾಗಿ ನೀವು ನಿಮ್ಮ ಒಂದು ಸ್ಟೇಟಸ್ನ ನೋಡಬಹುದು.
ಈ ರೀತಿಯಾಗಿ ನೀವು ನಿಮ್ಮ ಒಂದು ಕುಟುಂಬಕ್ಕೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣ ಬಂದಿದೆಯೋ ಇಲ್ವೋ ಅಂತ ಚೆಕ್ ಮಾಡಬಹುದು.
ಇನ್ನು ಹೆಚ್ಚಿನ ಒಂದು ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪಿಗೆ ಸೇರಬಹುದು.