ನಮಸ್ಕಾರ ಸ್ನೇಹಿತರೆ ಆಹಾರ ಇಲಾಖೆಯಿಂದ ಹೊಸ ಆದೇಶ ಬಂದಿದ್ದು ರೇಷನ್ ಕಾರ್ಡ್ ತಿದ್ದುಪಡಿ ಅಂದರೆ ಹೆಸರು ಬದಲಾವಣೆ, ಮನೆ ಮುಖ್ಯಸ್ಥರ ಬದಲಾವಣೆ, ಹೆಸರು ಸೇರ್ಪಡೆ, ಹೆಸರು ಡಿಲೀಟ್ ಮಾಡಲು ಅವಕಾಶ ಕೊಟ್ಟಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಮೇಲೆ ತಿಳಿಸಿರುವ ಹಾಗೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭವಾಗಿದ್ದು ರೇಷನ್ ಕಾರ್ಡ್ ಇರುವಂತಹ ಪ್ರತಿಯೊಬ್ಬರೂ ಕೂಡ ಏನಾದರೂ ಹೆಸರು ಸೇರಿಸುವುದು ಅಥವಾ ಹೆಸರು ಬದಲಾವಣೆ ಮಾಡೋದು, ಹೆಸರು ತೆಗೆದು ಹಾಕುವುದು ಇದ್ದರೆ ಕೂಡಲೇ ಹತ್ತಿರ ಇರುವಂತ ಸೇವಾ ಕೇಂದ್ರಗಳಗೆ ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದು. ಇದು ಸೀಮಿತ ಅವಧಿಗೆ ಮಾತ್ರ. ಈ ಒಂದು ಅವಕಾಶ ನೀಡಿದೆ ಅರ್ಜಿ ಸಲ್ಲಿಸುವಂಥವರು ಕೂಡಲೇ ಅರ್ಜಿ ಸಲ್ಲಿಸಿ.
ಎಪಿಎಲ್ ಅಥವಾ ಬಿಪಿಎಲ್ ಎರಡು ರೇಷನ್ ಕಾರ್ಡ್ ತಿದ್ದುಪಡೆ ಮಾಡಬಹುದಾ?
ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಇದ್ದಂತಹ ಪ್ರತಿಯೊಬ್ಬರೂ ಕೂಡ ಈ ಒಂದು ಅರ್ಜಿ ಸಲ್ಲಿಸಲು ಅವಕಾಶ ಇದೆ ಯಾರು ಬೇಕಾದರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬೇಕಾದರೆ ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಮತ್ತು ಬಯೋಮೆಟ್ರಿಕ್ ಸಹಾಯದಿಂದ ಅರ್ಜಿಯನ್ನು ಸಲ್ಲಿಸಬಹುದು.
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬೇಕಾಗುವಂತಹ ದಾಖಲಾತಿಗಳು
ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡೆಗೆ ಬೇಕಾಗುವಂತಹ ದಾಖಲಾತಿಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಅದೇ ಪ್ರಮಾಣ ಪತ್ರ
- ಐದು ವರ್ಷದೊಳಗಿನ ಮಕ್ಕಳಿದ್ದರೆ ಜನ್ಮ ದಿನಾಂಕ ಪ್ರಮಾಣ ಪತ್ರ ಬೇಕಾಗುತ್ತೆ
ಎಪಿಎಲ್ ರೇಷನ್ ಕಾರ್ಡ ತಿದ್ದುಪಡಿಗೆ ಬೇಕಾಗುವಂತಹ ದಾಖಲಾತಿಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಆಧಾರ್ ಕಾರ್ಡ್ ಮೊಬೈಲ್ ನಂಬರ್ ಲಿಂಕ್ ಇರಬೇಕಾಗುತ್ತೆ.
- ಐದು ವರ್ಷದೊಳಗಿನ ಮಕ್ಕಳು ಇದ್ದರೆ ಜನನ ಪ್ರಮಾಣ ಪತ್ರ ಇರಬೇಕಾಗುತ್ತೆ.
ಈ ರೀತಿಯಾಗಿ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದು.
ರೇಷನ್ ಕಾರ್ಡ್ ತಿದ್ದುಪಡೆ ಎಲ್ಲೆಲ್ಲಿ ಮಾಡಬಹುದು
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಹತ್ತಿರವಿರುವಂತಹ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
- CSC ಸೆಂಟರ್
- ಗ್ರಾಮ ಒನ್
- ಕರ್ನಾಟಕ ಒನ್
- ಸೇವಾ ಸಿಂಧು ಕೇಂದ್ರ
ಈ ಎಲ್ಲ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಕೇವಲ ಕಡಿಮೆ ದಿನಗಳ ಅವಕಾಶ ಇದ್ದು ಕೂಡಲೇ ಅರ್ಜಿ ಸಲ್ಲಿಸಬಹುದು ಸಮಯ ಮುಗಿದ ಮೇಲೆ ತಿದ್ದುಪಡೆ ಮಾಡಲು ಅವಕಾಶ ಇರುವುದಿಲ್ಲ ಆದ ಕಾರಣ ಕೊಡಲೇ ಅರ್ಜಿ ಸಲ್ಲಿಸಿ.