FID ಎಂದರೇನು? FID ಮಾಡುವುದರಿಂದ ಏನು ಪ್ರಯೋಜನ

ನಮಸ್ಕಾರ ಸ್ನೇಹಿತರೆ ಎಫ್ಐಡಿ(FID) ಎಂದರೆ ಫಾರ್ಮರ್ ಐಡಿ ಒಂದು ಐಡಿ ಮಾಡುವುದು ಹೇಗೆ ಮತ್ತು ಇದರಿಂದ ಏನೆಲ್ಲ ಉಪಯೋಗವಿದೆ ಮತ್ತೆ ಇದನ್ನು ಕಡ್ಡಾಯವಾಗಿ ಮಾಡಲೇಬೇಕಾ ಅಂತ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ FID ಕಡ್ಡಾಯವಾಗಿ ಮಾಡಲೇಬೇಕು ಏಕೆಂದರೆ ರೈತರಿಗೆ ತುಂಬಾ ಅನುಕೂಲವಾಗಲಿರುವ ಯೋಜನೆಗಳನ್ನು ಪಡೆಯಲು ಈ ಒಂದು fid ಕಡ್ಡಾಯವಾಗಿ ಬೇಕಾಗುತ್ತೆ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಒಂದು ಐಡಿ ಮಾಡಿಸಲೇಬೇಕು. ಇದನ್ನು ಯಾವ ರೀತಿ ಮಾಡಬೇಕು ಅಂತ ಅಂದರೆ ಸಂಪೂರ್ಣ ಮಾಹಿತಿ ಕೆಳಗಡೆ ನೋಡಬಹುದು.

(FID)ಎಫ್ ಐ ಡಿ ಪಡೆದುಕೊಳ್ಳಲು ಅರ್ಜಿ ಹಾಕುವುದು ಹೇಗೆ ಮತ್ತು ಎಫ್ ಐ ಡಿ ಅರ್ಜಿ ಹಾಕುವುದು ಎಲ್ಲಿ ಅಂತ ಸಂಪೂರ್ಣ ಮಾಹಿತಿ ಇಲ್ಲಿ ನೋಡಬಹುದು

(FID)ಎಫ್ ಐ ಡಿ ಅರ್ಜಿ ಹಾಕಲು ಹತ್ತಿರವಿರುವಂತಹ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು, ಅಥವಾ ಹತ್ತಿರವಿರುವಂತಹ CSC ಸಿ ಎಸ್ ಸಿ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಗ್ರಾಮಒನ ಕರ್ನಾಟಕಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ರೈತರಿಗೆ 5 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ

ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು

(FID)ಎಫ್ ಐ ಡಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವವು ಅಂದ್ರೆ.

  • ರೈತರ ಒಂದು ಆಧಾರ್ ಕಾರ್ಡ್ ಬೇಕಾಗುತ್ತದೆ
  • ಹೊಲದ ಉತಾರಿ,
  • ಬ್ಯಾಂಕ್ ಪಾಸ್ ಬುಕ್,
  • ರೇಷನ್ ಕಾರ್ಡ್  ಅಥವಾ ವೋಟರ್ ಐಡಿ
  • ಪಾಸ್ಪೋರ್ಟ್ ಸೈಜ್ ಫೋಟೋ

ಈ ಎಲ್ಲ ದಾಖಲಾತಿಗಳು (FID)ಎಫ್ ಐ ಡಿ ಅರ್ಜಿ ಹಾಕಲ್ಲ ಬೇಕಾಗುತ್ತೆ. ಅರ್ಜಿ ಹಾಕುವ ಸಂದರ್ಭದಲ್ಲಿ ಈ ಎಲ್ಲ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು

ಎಫ್ ಐ ಡಿ ಇಂದ ಏನು ಪ್ರಯೋಜನ.

ಎಫ್ ಐ ಡಿ ಅರ್ಜಿ ಸಲ್ಲಿಸುವುದರಿಂದ ರೈತರಿಗೆ ತುಂಬಾ ಒಂದು ಅನುಕೂಲವಾಗಲಿದೆ ಹೇಗಂದರೆ

  • ರೈತರು ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ಅರ್ಜಿ ಸಲ್ಲಿಸಲು ಈ ಒಂದು ಎಫ್ ಐಡಿ ಕಡ್ಡಾಯವಾಗಿ ಬೇಕಾಗುತ್ತೆ.
  • ಪ್ರಧಾನ ಮಂತ್ರಿ ಕಿಸಾನ್ ಐಡಿ ಮಾಡಲು ಬೇಕಾಗುತ್ತೆ.
  • ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಪಡೆಯಲು ಈ ಒಂದು fid ಕಡ್ಡಾಯವಾಗಿ ಬೇಕಾಗುತ್ತದೆ fid ಇಲ್ಲದಿದ್ದರೆ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಬರೋದಿಲ್ಲ ಆದಕಾರಣ ಪ್ರತಿಯೊಬ್ಬ ರೈತರು ಕೂಡ ಈ ಒಂದು ಎಫ್ ಐ ಡಿ ಕಡ್ಡಾಯವಾಗಿ ಮಾಡಲೇಬೇಕು

ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಬಹುದು ಸೇರಬಹುದು.

Leave a comment