ನಮಸ್ಕಾರ ಸ್ನೇಹಿತರೆ ಟ್ಯಾಕ್ಸಿ ಮತ್ತು ಓಲಾ ಕ್ಯಾಬ್ ಡ್ರೈವರ್ ಗಳಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡಿ ಅಂತಾನೆ ಹೇಳಬಹುದು ಅದು ಏನೆಂದರೆ ಹೊಸ ಟ್ಯಾಕ್ಸಿ ಕಾರ್ ಖರೀದಿ ಮಾಡಲು ಸರಕಾರದ ವತಿಯಿಂದ 3 ಲಕ್ಷ ಸಹಾಯಧನ ಶೇಕಡ 50ರಷ್ಟು 3 ಲಕ್ಷದವರೆಗೆ ಸಹಾಯಧನ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೋಡಬಹುದು.
ಮೇಲೆ ತಿಳಿಸಿರುವ ಹಾಗೆ ರಾಜ್ಯ ಸರ್ಕಾರದಿಂದ ಹೊಸ ಟ್ಯಾಕ್ಸಿ ಕಾರ್ ಖರೀದಿ ಮಾಡುವವರಿಗೆ ಸಾಲ ಸೌಲಭ್ಯಗಳು ಸಿಗುತ್ತೆ ಅಂದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಅಂತವರು ಈ ಒಂದು ಯೋಜನೆಯಿಂದ ಟ್ಯಾಕ್ಸಿ ಕಾರ್ ಮತ್ತು ಸರಕು ಸಾಗಾಣಿಕೆ ವಾಹನ ಖರೀದಿ ಮಾಡಲು ಅಲ್ಪಸಂಖ್ಯಾತ ನಿಗಮದಿಂದ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಸಬಹುದು.
ಈ ಒಂದು ಯೋಜನೆ ಯಾರಿಗೆ ಸಿಗುತ್ತೆ
ಈ ಒಂದು ಯೋಜನೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಅಂತಹ ಒಂದು ಅಭ್ಯರ್ಥಿಗಳಿಗೆ ಈ ಒಂದು ಯೋಜನೆಯಿಂದ 3, 00,000 ಸಿಗುತ್ತೆ.
ಅಲ್ಪಸಂಖ್ಯಾತರ ಸಮುದಾಯದಲ್ಲಿ ಯಾರಿಗೆ ಅನಕೂಲ ಆಗಲಿದೆ
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಬರುವಂತಹ ಪ್ರತಿಯೊಂದು ಸಮುದಾಯಗಳು ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಸಬಹುದು ಈ ಒಂದು ಸಮುದಾಯಗಳಲ್ಲಿ ಮುಸ್ಲಿಮರು, ಜೈನರು, ಸಿಕ್ಕರು, ಕ್ರಿಶ್ಚಿಯನ್ ಮತ್ತು ಪಾರ್ಸಿಗಳು ಈ ಎಲ್ಲಾ ಸಮುದಾಯಗಳು ಈ ಒಂದು ನಿಗಮದಿಂದ ಈ ಒಂದು ಸಾಲ ಸೌಲಭ್ಯಗಳನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ
ಈ ಒಂದು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 25.09.202
ಅರ್ಜಿ ಸಲ್ಲಿಸುವುದು ಹೇಗೆ
- ಟ್ಯಾಕ್ಸಿ ಕಾರ್ ಮತ್ತು ಸರಕು ಸಾಗಾಣಿಕೆ ವಾಹನ ಖರೀದಿ ಮಾಡಲು ಕೆ.ಎಂ.ಡಿ.ಸಿ (KMDC) ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ https://kmdconline.karnataka.gov.in/Portal/home ಈ ಒಂದು ಲಿಂಕ್ ಮೂಲಕ ಓಪನ್ ಮಾಡಿ.
- ನಂತರ ಸ್ವಾವಲಂಬಿ ಸಾರಥಿ ಯೋಜನೆ ಮೇಲೆ ಕ್ಲಿಕ್ ಮಾಡಿ ನಂತರ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಅಂತ ಇರುತ್ತೆ ಆ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
- ನಂತರ ನಿಮ್ಮ ಒಂದು 10 ಅಂಕಿಯ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ.
- ನಂತರ ನಿಮ್ಮ ಒಂದು ಆಧಾರ್ ಕಾರ್ಡ್ ನಂಬರನ್ನ ಎಂಟರ್ ಮಾಡಿ.
- ನಂತರ ಆಧಾರ ಕಾರ್ಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಓಟಿಪಿ ಬರುತ್ತೆ.
- ಅ ಒಂದು ಓಟಿಪಿ ನ ಎಂಟರ್ ಮಾಡಿ.
- ನಂತರ ಈ ಒಂದು ಯೋಜನೆ ಅರ್ಜಿ ಓಪನ್ ಆಗುತ್ತೆ ಅಲ್ಲಿ ಅಗತ್ಯವಿರುವಂತಹ ದಾಖಲೆಗಳನ್ನು ಸಲ್ಲಿಸಿ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು.
ಈ ರೀತಿಯಾಗಿ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು
ಕೆ ಎಂ ಡಿ ಸಿ ಲೋನ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಜಾತಿ ಪ್ರಮಾಣ ಪತ್ರ ಅಥವಾ ಅಲ್ಪಸಂಖ್ಯಾತರ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಪ್ರತಿ
- ವಾಹನ ಚಾಲನ ಪರವಾನಗಿ ಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ವಾಹನದ ಅಂದಾಜು ದರ ಪಟ್ಟಿ
- ಸ್ವಯಂ ಘೋಷಣೆ ಪತ್ರ
ಅರ್ಜಿ ಸಲ್ಲಿಸಲು ಅರ್ಹತೆಗಳು ಏನು
- ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು ಮತ್ತು ಅಲ್ಪಸಂಖ್ಯಾತ ನಿಗಮದಲ್ಲಿ ಅಲ್ಪಸಂಖ್ಯಾತರಿಗೆ ಸೇರಿದವರಾಗಿರಬೇಕು.
- ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದ ಒಳಗೆ ಇರಬೇಕು.
- ಕುಟುಂಬದ ವಾರ್ಷಿಕ ಕುಟುಂಬದ ಆದಾಯ 4,50,000 ಕ್ಕಿಂತ ಕಡಿಮೆ ಇರಬೇಕು.
- ಅರ್ಜಿದಾರರು RTO ಇಂದ ಕಾರ್ ಡ್ರೈವಿಂಗ್ ಲೈಸೆನ್ಸ್ ಪಡೆದಿರಬೇಕು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರಕಾರಿ ನೌಕರರಾಗಿರಬಾರದು.
- ಅರ್ಜಿದಾರರ ಕುಟುಂಬದವರು ಕಳೆದ ಐದು ವರ್ಷಗಳಿಂದ ಈ ಒಂದು ನಿಗಮದಲ್ಲಿ ಯಾವುದೇ ಸಾಲ ಸೌಲಭ್ಯ ಪಡೆದಿರಬಾರದು.
ಈ ರೀತಿಯಾಗಿ ಕೆ.ಎಂ.ಡಿ.ಸಿ ವೆಬ್ ಸೈಟ್ ನಲ್ಲಿ ಹೊಸ ಕಾರ್ ಖರಿದಿ ಮಾಡಲು ಅಥವಾ ಟ್ಯಾಕ್ಸಿ ಮತ್ತು ಸರಕು ಸಾಗಾಣಿಕೆ ವಾಹನ ಪಡೆಯಲು ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಬಹುದು ಅಥವಾ ಟೆಲಿಗ್ರಾಂ ಗ್ರೂಪ್ಗೆ ಸೇರಬಹುದು ಪೆಸ್ ಬುಕ ಪೇಜ ಫಾಲೋ ಮಾಡಿ.