ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪಟಾಪ್ ಇಂದೆ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಎಲ್ಲ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಒಂದು ಬಂಪರ್ ಕೊಡಿಗೆ ಅಂತಾನೆ ಹೇಳಬಹುದು ಅದು ಏನೆಂದರೆ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಲ್ಯಾಪ್ಟಾಪ್ ಅರ್ಜಿಗಳನ್ನು ಆಹ್ವಾನ ಮಾಡಿದರೆ ಇದನ್ನ ಅರ್ಜಿ ಸಲ್ಲಿಸುವುದು ಹೇಗೆ ಮತ್ತೆ ಕೊನೆಯ ದಿನಾಂಕ ಯಾವಾಗ ಸಂಪೂರ್ಣ ಮಾಹಿತಿ ಈ ಒಂದು ಲೆಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ಕರ್ನಾಟಕದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ಅರ್ಜಿ ಕರೆದಿದ್ದು ಒಂದು ಅರ್ಜಿ ಪಡೆಯಬೇಕಾದರೆ ಏನೆಲ್ಲಾ ದಾಖಲಾತಿಗಳು ಬೇಕು ಮತ್ತೆ ಅರ್ಜಿ ಸಲ್ಲಿಸುವುದು ಎಲ್ಲಿ ಇದರ ಸಂಪರ್ಕ ಮಾಹಿತಿ ಕೆಳಗಡೆ ನೀಡಲಾದ ವಿವರದಲ್ಲಿ ನೋಡಬಹುದು.

ಅರ್ಜಿ ಸಲ್ಲಿಸಲು ಯಾರಿಗೆ ಅವಕಾಶ ಇದೆ

  • ಉಚಿತ ಲ್ಯಾಪ್ಟಾಪ್ ಗಾಗಿ ಅರ್ಜಿ ಸಲ್ಲಿಸಲು ಕರ್ನಾಟಕದ ಕರ್ನಾಟಕ ಕಟ್ಟಡ ಕಾರ್ಮಿಕರ ಮಂಡಳಿಯಿಂದ ನೀಡಲಾದ ಕಾರ್ಮಿಕರ ಕಾರ್ಡ್ ಇರಬೇಕು ಮತ್ತು ಅದು ಚಲಾವಣೆಯಲ್ಲಿ ಇರಬೇಕು ಮತ್ತು ಕರ್ನಾಟಕದ ನಿವಾಸಿ ಆಗಿರಬೇಕು.
  • ಕಾರ್ಮಿಕರ ಮಕ್ಕಳು ಪ್ರಥಮ ಪಿಯುಸಿ ಅಥವಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಆಗಿರಬೇಕು.
  • ಮತ್ತು ಕಾರ್ಮಿಕರ ಮಕ್ಕಳ ಹಿಂದಿನ 10ನೇ ತರಗತಿಯಲ್ಲಿ ಪಾಸ್ ಆಗಿರುವಂತಹ ಸರ್ಟಿಫಿಕೇಟ್ ಬೇಕಾಗುತ್ತೆ.
  • ಮತ್ತೆ ಕಾರ್ಮಿಕರಿಗೆ ನೀಡಲಾದ ಸ್ವಯಂ ಘೋಷಣೆ ಪತ್ರ ಬೇಕಾಗುತ್ತದೆ.

ದಾಖಲಾತಿಗಳು

  • ಕಟ್ಟಡ ಕಾರ್ಮಿಕರ ಕಾರ್ಡ್ ರಾಜ್ಯ ಸರ್ಕಾರದಿಂದ ನೀಡಲಾದ ಕಟ್ಟಡ ಕಾರ್ಮಿಕರ ಕಾರ್ಡ್.
  • ಕಾರ್ಮಿಕರ ಮಕ್ಕಳ ಹಿಂದಿನ ತರಗತಿಯ ಪಾಸ್ ಆಗಿರುವಂತಹ ಮಾರ್ಕ್ಸ್ ಕಾರ್ಡ್
  • ವಿದ್ಯಾರ್ಥಿಗಳ ಭಾವಚಿತ್ರ ಮತ್ತು ಫಲಾನುಭವಿ ಭಾವಚಿತ್ರ.
  • ವಿದ್ಯಾ ಸಂಸ್ಥೆ ಮುಖ್ಯಸ್ಥರ ಸಹಿ ಆಗಿರುವಂತಹ ವಿದ್ಯಾರ್ಥಿ ವ್ಯಾಸಂಗ ಪ್ರಮಾಣ ಪತ್ರ ಬೇಕಾಗುತ್ತದೆ
  • ಕಟ್ಟಡ ಕಾರ್ಮಿಕರು ಮತ್ತೆ ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ ಬೇಕಾಗುತ್ತೆ
  • ಕಾರ್ಮಿಕರು ಹಿಂದೆ ಸರಕಾರದಿಂದ ಅಥವಾ ಯಾವುದೇ ಸಂಘ ಸಂಸ್ಥೆಗಳಿಂದ ಯಾವುದೇ ಇಲಾಖೆಯಿಂದ ಯಾವುದೇ ನಿಗಮದಿಂದ ಉಚಿತ ಲ್ಯಾಪ್ಟಾಪ್ ಅಥವಾ ಟ್ಯಾಬ್ ಪಡೆದಿರುವುದಿಲ್ಲ ಎಂದು ಸ್ವಯಂ ದೃಢೀಕರಣ ಪ್ರಮಾಣ ಪತ್ರ ಬೇಕಾಗುತ್ತೆ

Leave a comment