CET ಮತ್ತು NEET ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ 3 ಲಕ್ಷ ವಿದ್ಯಾಭ್ಯಾಸ ಸಾಲ ಯೋಜನೆ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಸಾಲ ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಬರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ 3 ಲಕ್ಷದವರೆಗೆ ವಿದ್ಯಾಭ್ಯಾಸ ಸಾಲ ಯೋಜನೆ ಪ್ರಾರಂಭ ಮಾಡಿದ್ದಾರೆ ಮತ್ತೆ ಒಂದು ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತೆ ಇದಕ್ಕೆ ಏನೆಲ್ಲಾ ದಾಖಲಾತಿಗಳು ಬೇಕು ಅಂತ ಒಂದು ಲೇಖನದಲ್ಲಿ ನೋಡಬಹುದು.

ಮೂರು ಲಕ್ಷ ಸಾಲ ಯೋಜನೆ ಯಾರಿಗೆ ಸಿಗುತ್ತೆ

ನಮಸ್ಕಾರ ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೂರು ಲಕ್ಷದವರೆಗೆ ಸಾಲ ಸಿಗಲಿದೆ ಇದನ್ನು ಪಡೆಯುವುದು ಹೇಗಂದರೆ.

  • ವಿದ್ಯಾರ್ಥಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಅಥವಾ ನೀಟ್ ಮುಖಾಂತರ ಬಿ.ಇ ಅಥವಾ ಎಂ.ಬಿ.ಬಿ.ಎಸ್ ಕೋರ್ಸ್ ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ಯೋಜನೆಯಿಂದ ಹಣ ಸಿಗುತ್ತೆ ಸಾಲ ಸೌಲಭ್ಯ ಸಿಗುತ್ತದೆ.
  • ವಿದ್ಯಾರ್ಥಿಯು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು/
  • ವಿದ್ಯಾರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು.

ವಿದ್ಯಾಭ್ಯಾಸ ಸಾಲ ಯೋಜನೆ ಪಡೆಯಲು ಬೇಕಾಗುವಂತಹ ದಾಖಲಾತಿಗಳು

  • ವಿದ್ಯಾರ್ಥಿಗಳ ವ್ಯಾಸಂಗ ಪ್ರಮಾಣ ಪತ್ರ ಬೇಕಾಗುತ್ತೆ
  • ಕಾಲೇಜು ಶುಲ್ಕದ ವಿವರ ಬೇಕಾಗುತ್ತೆ
  • ಹಿಂದಿನ ವರ್ಷ ಪಾಸ್ ಆಗಿರುವಂತಹ ಅಂಕ ಪಟ್ಟಿಯ ಪ್ರತಿ ಬೇಕಾಗಿದೆ
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್.
  • ಭದ್ರತಾ ಠೇವಣಿ ಪಾವತಿ ಮಾಡಿದ ರಶೀದಿ ಬೇಕಾಗುತ್ತೆ  (ಸಾಲದ ಮೊತ್ತದ 12%).
  • KEA ದಾಖಲಾತಿ ಆದೇಶ ಪತ್ರ ಬೇಕಾಗುತ್ತದೆ .
  • ಇಂಡೆಮ್ನಿಟಿ ಬಾಂಡ್ ಬೇಕಾಗುತ್ತೆ.
  • ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ ಬೇಕಾಗುತ್ತದೆ.
  • ಪೋಷಕರು ಸಹಿ ಮಾಡಿದ ಪೋಷಕರ ಸ್ವಯಂ ಘೋಷಣೆ ಪತ್ರ ಕೊಡಬೇಕಾಗುತ್ತದೆ.

Leave a comment