KMDC Loan ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯ ಪಡೆಯುವುದು ಹೇಗೆ

ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಬಂಪರ್ ಕೊಡುಗೆ. ಅಲ್ಪಸಂಖ್ಯಾತ ನಿಗಮದಿಂದ ಕೆ.ಎಂ.ಡಿ.ಸಿ ಲೋನ್ ಅಪ್ಲೈ ಮಾಡುವುದು ಹೇಗೆ ಮತ್ತೆ ಸಬ್ಸಿಡಿ ಪಡೆಯುವುದು ಹೇಗೆ ಪ್ರತಿಯೊಂದು ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತ ಸಮುದಾಯ ಗಳಿಗೆ ಸಾಲ ಸೌಲಭ್ಯಗಳು ಯೋಜನೆ ಯೋಜನೆಗಳನ್ನು ಜಾರಿಮಾಡಿದೆ ಇದರಲ್ಲಿ ಸುಮಾರು ಆರು ಯೋಜನೆಗಳು ಜಾರಿಯಾಗಲಿವೆ. ಅವುಗಳು ಯಾವುವೆಂದರೆ

  • ಅರಿವು ವಿದ್ಯಾಭ್ಯಾಸ ಸಾಲ ಯೋಜನೆ
  • ಶ್ರಮಶಕ್ತಿ ಸಾಲ ಯೋಜನೆ
  • ಸ್ವಾವಲಂಬಿ ಸಾರಥಿ ಯೋಜನ
  • ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ
  • ಗಂಗಾ ಕಲ್ಯಾಣ ಯೋಜನೆ
  • ವೃತ್ತಿ ಪ್ರೋತ್ಸಾಹ ಯೋಜನೆ

ಎಲ್ಲ ಯೋಜನೆಗಳನ್ನು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಪ್ರಾರಂಭವಾಗಿದೆ.

ಮೇಲೆ ತಿಳಿಸಿರುವ ಹಾಗೆ ಎಲ್ಲಾ ಯೋಜನೆಗಳನ್ನು ಕೆ ಎಂ ಡಿ ಸಿ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸಬೇಕು.

ಯೋಜನೆ ಯಾರಿಗೆ ಸಿಗುತ್ತೆ

ಮೇಲೆ ತಿಳಿಸಿರುವ ಹಾಗೆ ಕೆ.ಎಂ.ಡಿ.ಸಿ(KMDC) ವೆಬ್ ಸೈಟ್ ನಲ್ಲಿ ಬರುವಂತಹ ಪ್ರತಿಯೊಂದು ಯೋಜನೆಯು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಬರುವಂತಹ ಪ್ರತಿಯೊಬ್ಬರು ಒಂದು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಆದೇಶದಲ್ಲಿ ವಿವರಿಸಿ ದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.

ಅರ್ಜಿ ಸಲ್ಲಿಸಲು ಎಷ್ಟು ವಯಸ್ಸು ಇರಬೇಕು

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಸಾಲ ಸೌಲಭ್ಯಗಳ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಇರಬೇಕು ಮತ್ತು ಗರಿಷ್ಠ 55 ವರ್ಷದ ಒಳಗಡೆ ಇರಬೇಕು.

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಎಷ್ಟು ಸಾಲ ಸೌಲಭ್ಯ ಸಹಾಯಧನ ಸಿಗುತ್ತೆ

ಒಂದು ನಿಗಮದಲ್ಲಿ ಪ್ರತಿಯೊಂದು ಯೋಜನೆಗಳಲ್ಲಿ ಪ್ರತಿಯೊಂದು ಸೌಲಭ್ಯಗಳಲ್ಲಿ ಪ್ರತ್ಯೇಕ ಸಾಲ ಸೌಲಭ್ಯ ಸಿಗುತ್ತೆ, ಅದರಲ್ಲಿ ಕನಿಷ್ಠ 50 ಸಾವಿರದಿಂದ 20 ಲಕ್ಷದವರೆಗೆ ಸಾಲ ಸೌಲಭ್ಯ ಸಹಾಯಧನ ಸಿಗುತ್ತೆ ಅಂತ ಹೇಳಬಹುದು.

ಒಂದು ನಿಗಮದಲ್ಲಿ ಬರುವಂತಹ ಮುಖ್ಯ ಸಾಲ ಸೌಲಭ್ಯಗಳು

  • ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸಲು 50,000 ದವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.
  • ಮಹಿಳೆಯರಿಗೆ, ವಿಧವೆಯರಿಗೆ, ವಿಚ್ಛೇದಿತರು, ವಿವಾಹಿತ ಮಹಿಳೆಯರಿಗೆ ಯೋಜನೆ ಅಡಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು 25,000 ಸಾಲ ಮತ್ತು 25,000 ಸಹಾಯಧನ ನೀಡಲಾಗುತ್ತದೆ.
  • ಟ್ಯಾಕ್ಸಿ, ಸರಕು ಸಾಗಾಣಿಕೆ ಮಾಡಲು ವಾಹನವನ್ನು ಖರೀದಿ ಮಾಡಲು ಪ್ರತಿ ಫಲಾನುಭವಿಗಳಿಗೆ ವಾಹನ ಖರೀದಿ ಮಾಡಲು ಶೇಕಡ 50ರಷ್ಟು ಅಥವಾ ಗರಿಷ್ಠ 3 ಲಕ್ಷದವರೆಗೆ ಸಹಾಯಧನ ಸಿಗಲಿದೆ.
  • ಪ್ರಯಾಣಿಕ ಆಟೋರಿಕ್ಷಾ ಖರೀದಿಸಲು ಗರಿಷ್ಠ 75 ಸಾವಿರ ಸಹಾಯಧನ ನೀಡಲಾಗುತ್ತದೆ.

ಎಲ್ಲ ಸಾಲ ಸೌಲಭ್ಯಗಳು ಒಂದು ನಿಗಮದಲ್ಲಿ ಸಿಗುತ್ತೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಹೆಚ್ಚಿನ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಬಹುದು.

Leave a comment