ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದಂತಹ ಮಹಿಳೆಯರಿಗೆ 25,000 ವರೆಗೆ ಸಹಾಯಧನ ಸಿಗಲಿದೆ ಇದನ್ನು ಪಡೆಯುವುದು ಹೇಗೆ? ಮತ್ತೆ ಇದನ್ನು ಪಡೆಯಲು ಏನೆಲ್ಲ ದಾಖಲಾತಿಗಳು ಬೇಕು ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ನಮಸ್ಕಾರ
ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ
ಅಲ್ಪಸಂಖ್ಯಾತ ಸಮುದಾಯದಲ್ಲಿ ಬರುವಂತಹ ಮಹಿಳೆಯರು ಅದರಲ್ಲಿ ವಿಧವೆಯರು ವಿಚ್ಛೇದಿತರು ಹಾಗು ಅವಿವಾಹಿತ ಮಹಿಳೆಯರ
ಆರ್ಥಿಕ ಸವಲೀಕರಣಕ್ಕಾಗಿ ವಿಶೇಷ ಯೋಜನೆಯಾಗಿದೆ. ಈ ಒಂದು ಯೋಜನೆಯಲ್ಲಿ
50000 ಸಾಲ ಸಿಗುತ್ತೆ, ಅದರಲ್ಲಿ
25,000 ಸಾಲ ಮತ್ತು 25000 ಸಹಾಯಧನ ನೀಡಲಾಗುತ್ತೆ ಅರ್ಜಿ ಸಲ್ಲಿಸಲು ಏನು ಮಾಡಬೇಕೆಂದು ಈ
ಒಂದು ಲೇಖನದಲ್ಲಿ ನೋಡಬಹುದು.
ಈ ಒಂದು ಯೋಜನೆಯ ಹೆಸರು ಏನು
ಈ ಒಂದು ಯೋಜನೆಯ ಹೆಸರು ಶಮಶಕ್ತಿ ವಿಶೇಷ ಮಹಿಳಾ ಯೋಜನೆ, ಈ ಒಂದು ಯೋಜನೆಯಲ್ಲಿ
ಅರ್ಜಿ ಸಲ್ಲಿಸಿರುವಂತಹ ಪ್ರತಿಯೊಬ್ಬ ಮಹಿಳೆಗೂ 50,000 ಸಾಲ ಸಿಗುತ್ತೆ. ಅದರಲ್ಲಿ 25,000 ಸಾಲ ಮತ್ತು 25000 ಸಹಾಯಧನ ಅದರಲ್ಲಿ 25,000 ಸಾಲ ಮರುಪಾವತಿ ಮಾಡಬೇಕಾಗುತ್ತೆ
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು
- ಅರ್ಜಿದಾರರು ಸರಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು
- ಹರಿದರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
- ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು
- ಕುಟುಂಬದ ವಾರ್ಷಿಕ ಆದಾಯ 3,50,000 ಗಿಂತ ಕಡಿಮೆ ಇರಬೇಕು
- ರಾಜ್ಯದ ಕುಟುಂಬದಿಂದ ಯಾವುದೇ ಸದಸ್ಯರು ಸರಕಾರಿ ನೌಕರರಾಗಿರಬಾರದು
- ಅರ್ಜಿದಾರರ ಕುಟುಂಬದಲ್ಲಿ ಕಳೆದ ಐದು ವರ್ಷಗಳಿಂದ ಸರಕಾರದಿಂದ ಅಥವಾ ಯಾವುದೇ ನಿಗಮದಿಂದ ಇತರೆ ಯೋಜನೆ ಅಡಿಯಲ್ಲಿ ಯಾವುದೇ ಸಾಲ ಸೌಲಭ್ಯ ಪಡೆದಿರಬಾರದು
ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು
- ಯೋಜನಾ ವರದಿ
- ಅಲ್ಪಸಂಖ್ಯಾತ ಪ್ರಮಾಣ ಪತ್ರ ಅಥವಾ ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ
- ಬ್ಯಾಂಕ್ ಪಾಸ್ ಬುಕ್ ಪ್ರತೀ ಬೇಕಾಗುತ್ತೆ
- ಆಧಾರ್ ಕಾರ್ಡ್ ಪ್ರತಿ ಬೇಕಾಗುತ್ತೆ
- ಜಾಮೀನು ನೀಡಿದ ವರ ಅಥವಾ ನೀಡುವವರ ಸ್ವಯಂ ಘೋಷಣೆ ಪತ್ರ ಬೇಕಾಗುತ್ತೆ
- ಸ್ವಯಂ ಘೋಷಣೆ ಪತ್ರ ಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ
ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಸೆಪ್ಟೆಂಬರ್ 2023 ರಂದು ಕೊನೆಯ ದಿನಾಂಕ ಇದರೊಳಗೆ ಈ ಒಂದು ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ.