ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯಿಂದ ಹೊಸ ಯೋಜನೆ ಬಿಡುಗಡೆಯಾಗಿದ್ದು, ಆ ಯೋಜನೆ ಮಹಿಳೆಯರಿಗೆ ಮಾತ್ರ. ಆ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತೆ ಇದರ ಒಂದು ಕೊನೆಯ ದಿನಾಂಕ ಯಾವಾಗ ಅಂತ ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಮೇಲೆ ತಿಳಿಸಿರುವ ಹಾಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯಿಂದ ಮಹಿಳೆಯರಿಗೆ ಉದ್ಯೋಗ ಕೊಡುವ ದೃಷ್ಟಿಯಿಂದ ಮತ್ತು ಸ್ವಂತವಾಗಿ ವ್ಯಾಪಾರ ಮಾಡುವ ಕುರಿತು ಈ ಒಂದು ಯೋಜನೆಯು ಬಿಡುಗಡೆ ಮಾಡಿದ್ದಾರೆ ಅಂತ ಹೇಳಬಹುದು. ಈ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ ಅದಕ್ಕೆ ಬೇಕಾಗುವಂತಹ ದಾಖಲಾತಿಗಳು ಏನು ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
ಉದ್ಯೋಗಿನಿ ಯೋಜನೆ ಯಾರಿಗೆ ಅನ್ನಿಸುತ್ತೆ
ಈ ಒಂದು ಯೋಜನೆ ಪ್ರತಿಯೊಬ್ಬ ಮಹಿಳೆಯರಿಗೂ ಅನ್ವಯಿಸುತ್ತೆ.
- ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿರುವಂತಹ ಮಹಿಳೆಯರಿಗೆ ಸ್ವಂತ ವ್ಯಾಪಾರ ಮಾಡಲು ಗರಿಷ್ಠ ಸಾಲದ ಮೊತ್ತ 3 ಲಕ್ಷದವರೆಗೆ ಸಿಗುತ್ತೆ ಅದಕ್ಕೆ ಶೇಕಡ 50ರಷ್ಟು ಸಹಾಯಧನ ಸಿಗುತ್ತೆ ಮತ್ತು ಅವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಸಾಮಾನ್ಯ ಮತ್ತು ವಿಶೇಷ ವರ್ಗದ ಮಹಿಳೆಯರಿಗೆ ಈ ಯೋಜನೆಯಿಂದ ಸ್ವಂತವಾಗಿ ವ್ಯಾಪಾರ ಮಾಡಲು ಗರಿಷ್ಠ ಸಾಲದ ಮೊತ್ತ 3 ಲಕ್ಷದವರೆಗೆ ಸಿಗುತ್ತೆ ಅದಕ್ಕೆ ಶೇಕಡ 30ರಷ್ಟು ಸಹಾಯಧನ ಸಿಗುತ್ತೆ ಮತ್ತು ಅವರ ಒಂದು ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.
ವಯಸ್ಸಿನ ಮಿತಿ
ಎಲ್ಲ ವರ್ಗದ ಮಹಿಳೆಯರಿಗೆ ವಯೋಮಿತಿ 18 ವರ್ಷದಿಂದ 55 ವರ್ಷಗಳ ನಡುವೆ ಇರಬೇಕು.
ಯಾವ ವರ್ಗದ ಜನರಿಗೆ ಈ ಒಂದು ಯೋಜನೆ ಅನ್ವಯಿಸುತ್ತೆ
- ಈ ಯೋಜನೆಯ ಎಲ್ಲಾ ವರ್ಗದ ಮಹಿಳೆಯರಿಗೆ ಅನ್ವಯಿಸುತ್ತೆ ಅದರಲ್ಲಿ
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ
- ಸಾಮಾನ್ಯ ವರ್ಗದ ಮಹಿಳೆಯರಿಗೆ
- ವಿಶೇಷ ವರ್ಗದ ಮಹಿಳೆಯರಿಗೆ
ಎಲ್ಲ ವರ್ಗದ ಮಹಿಳೆಯರಿಗೆ ಈ ಒಂದು ಯೋಜನೆ ಅನ್ವಯಿಸುತ್ತೆ
ಅರ್ಜಿ ಸಲ್ಲಿಸುವುದು ಹೇಗೆ
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆಂದರೆ ಹತ್ತಿರವಿರುವಂತಹ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲಾಗುತ್ತದೆ. ಅದರಲ್ಲಿ ಕೆಲವು ಸೇವ ಕೇಂದ್ರಗಳಿಗೆ ಮಾತ್ರ ಈ ಒಂದು ಯೋಜನೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ಅವುಗಳು
- ಕರ್ನಾಟಕ ಒನ್
- ಗ್ರಾಮ ಒನ್
- ಬಾಪೂಜಿ ಸೇವಾ ಕೇಂದ್ರ
- ಬೆಂಗಳೂರು ಒನ್
ಈ ನಾಲ್ಕು ಸೇವ ಕೇಂದ್ರಗಳಲ್ಲಿ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ. ಇದರಲ್ಲಿ ಯಾವುದಾದರೂ ಒಂದು ಸೇವಕಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
ಈ ಎಲ್ಲಾ ದಾಖಲಾತಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬೇಕಾಗುತ್ತೆ.