ನಮಸ್ಕಾರ ಸ್ನೇಹಿತರೆ ಈ ವರ್ಷ 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಬರಗಾಲ ಸೃಷ್ಟಿಯಾಗಿದ್ದು ಬರಗಾಲದಿಂದ ಕಂಗೆಟ್ಟ ರೈತರಿಗೆ ಮತ್ತು ಅವರ ಒಂದು ಕುಟುಂಬಕ್ಕೆ ನೆರವಾಗಲು ರಾಜ್ಯ ಸರ್ಕಾರ ನೇರವಾಗಿ ಬರಗಾಲ ಪರಿಹಾರ ಹಣ ರೈತರ ಖಾತೆಗೆ ಜಮೆ ಮಾಡಲು ತೀರ್ಮಾನಿಸಿದೆ ಇದನ್ನು ಪಡೆಯುವುದು ಹೇಗೆ ಮತ್ತು ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಬರ ಪರಿಹಾರ ಯಾರಿಗೆ ಸಿಗುತ್ತೆ
ರಾಜ್ಯ ಸರ್ಕಾರ ಬರ ಪರಿಹಾರ ಘೋಷಣೆ ಮಾಡಿದ್ದು ಈ ಒಂದು ಪರಿಹಾರ ಬರಗಾಲದಿಂದ ನಷ್ಟವಾಗಿರುವ ರೈತರಿಗೆ ಈ ಒಂದು ಪರಿಹಾರ ಸಿಗುತ್ತೆ ಮತ್ತು ಬರಗಾಲ ಘೋಷಣೆ ಯಾಗಿರುವ ಪ್ರದೇಶಗಳು ಹಾಗೂ ಜಿಲ್ಲೆಗಳಲ್ಲಿ ಇರುವ ಪ್ರತಿಯೊಬ್ಬ ರೈತರಿಗೂ ಬರ ಪರಿಹಾರದ ಹಣ ರೂ.2000 ಮೊದಲನೇ ಕಂತು ನೇರವಾಗಿ ಅವರ ಖಾತೆಗೆ ಜಮ ಆಗುತ್ತೆ
ಬರ ಪರಿಹಾರ ಸಿಗಲು ನಿಮ್ಮ ಹತ್ತಿರ ಏನೆಲ್ಲ ಇರಬೇಕು
ಬರಗಾಲದಿಂದ ಕಂಗೆಟ್ಟ ರೈತರು ಬರ ಪರಿಹಾರ ಸಿಗಲು ನಿಮ್ಮ ಹತ್ತಿರ ಏನೆಲ್ಲಾ ದಾಖಲಾತಿಗಳು ಇರಬೇಕು ಅಂದರೆ
- ಆಧಾರ್ ಕಾರ್ಡ್.
- ಆಧಾರ್ ಕಾರ್ಡ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ.
- FID ನಂಬರ್ Farmer ID.
- ಉತ್ತಾರಿ ಮತ್ತು ಆಧಾರ್ ಕಾರ್ಡ್ ಜೋಡಣೆ ಆಗಿರಬೇಕು.
ಈ ಎಲ್ಲ ದಾಖಲಾತಿಗಳು ಸರಿಯಾಗಿದ್ದಲ್ಲಿ ರೈತರಿಗೆ ನೇರವಾಗಿ ಅವರ ಒಂದು ಖಾತೆಗೆ ಮೊದಲ ಕಂತು ಜಮಾ ಆಗುತ್ತೆ.
ಬರ ಪರಿಹಾರ ಎಷ್ಟು ಹಣ ಸಿಗುತ್ತೆ
ರಾಜ್ಯ ಸರ್ಕಾರ ಬರ ಪರಿಹಾರ ಘೋಷಣೆ ಮಾಡಿದ್ದು ಅದು ಕಂತುಗಳ ರೂಪದಲ್ಲಿ ಸಿಗಲಿದೆ 2000 ಬಿಡುಗಡೆ ಮಾಡಲಿದ್ದಾರೆ.
ಪರಿಹಾರ ಹಣ ಯಾವಾಗ ಸಿಗುತ್ತೆ
ಬರ ಪರಿಹಾರ ಹಣ 2024ರ ಹೊಸ ವರ್ಷದ ಆರಂಭದಲ್ಲಿ ಸಿಗಲಿದೆ ಬರ ಪರಿಹಾರ ಹಣ ಕೇವಲ ಬರಗಾಲ ಘೋಷಣೆಯಾಗಿರುವ ಜಿಲ್ಲೆಗಳಲ್ಲಿರುವ ರೈತರಿಗೆ ಮಾತ್ರ ಸಿಗಲಿದೆ.