ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ 2024 free tailoring machine

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ತೆಗೆದುಕೊಳ್ಳಲು ಕೇಂದ್ರ ಸರ್ಕಾರದಿಂದ 15,000 ಹದಿನೈದು ಸಾವಿರ ರೂಪಾಯಿ ಉಚಿತವಾಗಿ ಕೊಡುತ್ತಿದ್ದಾರೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವುದು ಹೇಗೆ? ಮತ್ತೆ ಅದಕ್ಕೆ ಏನೆಲ್ಲಾ ದಾಖಲಾತಿಗಳು ಬೇಕು ಮತ್ತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರತಿಯೊಂದು ಮಾಹಿತಿ ಈ ಒಂದು ಲೇಖನದಲ್ಲಿ ಕೊಡಲಾಗಿದೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.

ಯೋಜನೆಯ ಹೆಸರು ಏನು

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತೆಗೆದುಕೊಳ್ಳಲು ಕೇಂದ್ರ ಸರ್ಕಾರದಿಂದ ಸಹಾಯಧನ ಸಿಗಲಿದೆ. ಮತ್ತು ಈ ಒಂದು ಯೋಜನೆಯ ಹೆಸರು ಪಿಎಂ ವಿಶ್ವಕರ್ಮ ಯೋಜನೆ.

ಅರ್ಜಿ ಸಲ್ಲಿಸುವುದು ಹೇಗೆ

(PM) ಪಿಎಂ ವಿಶ್ವಕರ್ಮ ಯೋಜನೆ ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಇದನ್ನು ಅರ್ಜಿ ಸಲ್ಲಿಸಲು ಹತ್ತಿರವಿರುವಂತಹ (CSC)ಸಿ.ಎಸ್.ಸಿ ಕಾಮನ್ ಸರ್ವಿಸ್ ಸೆಂಟರ್ ಬೇಟೆ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಗತ್ಯವಿರುವಂತಹ ದಾಖಲಾತಿಗಳನ್ನ ತೆಗೆದುಕೊಂಡು ಹೋಗಬೇಕು.

ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪ್ಯಾನ್ ಕಾರ್ಡ್

ಈ ರೀತಿಯಾಗಿ ಈ ಎಲ್ಲ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸಬೇಕು.

ಯುವನಿಧಿ ಅರ್ಜಿ ಸಲ್ಲಿಸುವ ಲಿಂಕ

ಹೊಲಿಗೆ ಯಂತ್ರ ಖರೀದಿಸಲು ಎಷ್ಟು ಹಣಸಿಗುತ್ತೆ

ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಹೊಲಗೆ ಯಂತ್ರ ಖರೀದಿ ಮಾಡಲು 15,000 ಸಿಗುತ್ತೆ.

15 ಸಾವಿರ ರೂಪಾಯಿ ಪಡೆಯುವುದು ಹೇಗೆ

  • ಈ ಒಂದು ಸಹಾಯಧನ ಪಡೆಯಲು ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
  • ನಿಮ್ಮ ಅರ್ಜಿ ಆಯ್ಕೆಯಾದ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ತರಬೇತಿ ಇರುತ್ತೆ 7 ದಿನಗಳಿಂದ 15 ದಿನಗಳವರೆಗೆ ಈ ಒಂದು ತರಬೇತಿಯನ್ನು ಪಡೆಯಬೇಕಾಗುತ್ತದೆ.
  • ತರಬೇತಿ ಪಡೆಯಲು ನಿಮಗೆ ಒಂದು ದಿನಕ್ಕೆ ಕೇಂದ್ರ ಸರ್ಕಾರ 500 ರೂಪಾಯಿ ಕೊಡುತ್ತೆ.
  • 7 ದಿನ ತರಬೇತಿ ಇದ್ದರೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ 3,500 ಸಿಗುತ್ತೆ.
  • ತರಬೇತಿ ಮುಗಿದ ನಂತರ ಹೊಲಿಗೆ ಯಂತ್ರಕ್ಕಾಗಿ ಯಂತ್ರೋಪಕರಣ ಖರೀದಿಸಲು 15 ಸಾವಿರ ರೂಪಾಯಿ ಸಹಾಯಧನ ಸಿಗುತ್ತೆ.

ಒಂದು ಲಕ್ಷದವರೆಗೆ ಸಾಲ

  • ತರಬೇತಿ ಮುಗಿದ ನಂತರ ಒಂದು ಲಕ್ಷ ರೂಪಾಯಿ ಸಾಲ ಪಡೆಯಬಹುದು.
  • ಪಡೆದಿರುವಂತ ಸಾಲವನ್ನು ತೀರಿಸಲು 18 ತಿಂಗಳ ಕಾಲಾವಕಾಶ ಇರುತ್ತೆ ಮರುಪಾವತಿಸ ಬೇಕಾಗುತ್ತೆ.
  • 18 ತಿಂಗಳಲ್ಲಿ ಮರುಪಾವತಿ ಆದ ನಂತರ ಎರಡು ಲಕ್ಷ ಸಾಲ ಸಿಗುತ್ತೆ.
  • ಎರಡು ಲಕ್ಷ ಸಾಲ ತೀರಿಸಲು ಮೂರು ವರ್ಷ ಕಾಲಾವಕಾಶ ಇರುತ್ತೆ.

ಒಂದು ಲಕ್ಷ ಸಾಲಕ್ಕೆ ಎಷ್ಟು ಬಡ್ಡಿ

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಒಂದುಲಕ್ಷ ಸಾಲ ಪಡೆದರೆ ನಿಮಗೆ ಕೇವಲ ಐದು 5% ಮಾತ್ರ ಬಡ್ಡಿ ಇರುತ್ತೆ.

ಅರ್ಜಿ ಸಲ್ಲಿಸುವ ಲಿಂಕ

https://pmvishwakarma.gov.in/


Leave a comment