ನಮಸ್ಕಾರ ಸ್ನೇಹಿತರೆ ಕೇಂದ್ರ ಸರಕಾರ ಯೋಜನೆ ಮಾಡಿರುವ ಈ ಶ್ರಮ ಕಾರ್ಡ್ ಇದರಿಂದ ಹಲವಾರು ಕಾರ್ಮಿಕರಿಗೆ ಕುಶಲಕರ್ಮಿಗಳಿಗೆ ಅಸಂಘಟಿತ ಕಾರ್ಮಿಕರಿಗೆ ಹಲವಾರು ಸ್ವಂತ ಉದ್ಯೋಗ ಮಾಡುತ್ತಿರುವ ಪ್ರತಿಯೊಬ್ಬರೂ ಕೂಡ ಈ ಶ್ರಮ ಕಾರ್ಡ ಮಾಡಿಸಲೇಬೇಕು. ಇದನ್ನು ಮಾಡಿಸುವುದು ಹೇಗೆ ಇದರಿಂದ ಏನೆಲ್ಲಾ ಪ್ರಯೋಜನ ಮತ್ತು ಪ್ರತಿ ತಿಂಗಳು 3000 ಪಡೆಯುವುದು ಹೇಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಸ್ನೇಹಿತರೆ ಮೇಲೆ ತಿಳಿಸುವ ಹಾಗೆ ಈ ಶ್ರಮ ಕಾಡ ಮಾಡುವುದರಿಂದ ಕಾರ್ಮಿಕರಿಗೆ ಹಲವಾರು ಸೌಲಭ್ಯಗಳು ದೊರೆಯಲಿದೆ ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಕಾರ್ಮಿಕರ ಕಾರ್ಡ್ ಆಗಿದ್ದು ಇದನ್ನು ಮಾಡಿಸುವುದರಿಂದ ಪ್ರತಿಯೊಬ್ಬ ಕಾರ್ಮಿಕರಿಗೂ ಅನುಕೂಲವಾಗಲಿದೆ ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಈ ಅರ್ಜಿ ಸಲ್ಲಿಸುವುದರಿಂದ ಏನಲ್ಲ ಸೌಲಭ್ಯಗಳು ಸಿಗುತ್ತೆ
- ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ
- ಪಿಂಚಣಿ ಯೋಜನೆಗಳು
- ಫಲಾನುಭವಿಯ ಪ್ರವೇಶ ವಯಸ್ಸಿನ ಆಧಾರದ ಮೇಲೆ ಮಾಸಿಕ ಕೊಡುಗೆಯು ರೂ.55 ರಿಂದ ರೂ.200 ವರೆಗೆ ಇರುತ್ತದೆ.
- ಈ ಯೋಜನೆಗಳ ಅಡಿಯಲ್ಲಿ, ಫಲಾನುಭವಿಯಿಂದ 50% ಮಾಸಿಕ ಹಣ ಪಾವತಿಸಲಾಗುತ್ತದೆ ಮತ್ತು ಅದರ ಸರಿಸಮವಾಗಿ ಕೇಂದ್ರ ಸರ್ಕಾರವು ಹಣವನ್ನು ಪಾವತಿಸುತ್ತದೆ.
ಅರ್ಹತೆ
- ಭಾರತೀಯ ಆಗಿರಬೇಕು
- ಅಸಂಘಟಿತ ಕಾರ್ಮಿಕರು ಆಗಿರಬೇಕು ಅದರಲ್ಲಿ ಬೀದಿ ವ್ಯಾಪಾರಿಗಳು, ಕೃಷಿ ಸಂಬಂಧಿತ ಕೆಲಸಗಳು, ಕಟ್ಟಡ ಕಾರ್ಮಿಕರು, ಚರ್ಮ, ಕೈಮಗ್ಗ, ಮಧ್ಯಾಹ್ನದ ಊಟ, ರಿಕ್ಷಾ ಅಥವಾ ಆಟೋ ಚಾಲಕರು, ಚಿಂದಿ ಆಯುವವರು, ಬಡಗಿಗಳು, ಮೀನುಗಾರರು ಇತ್ಯಾದಿ ಉದ್ಯಮಗಳಲ್ಲಿ ಕೆಲಸ ಮಾಡುವವರು ಈ ಒಂದು ಯೋಜನೆಗೆ ಅರ್ಹರು.
- ವಯಸ್ಸು18-40 ವರ್ಷದೊಳಗಿನವರು ಆಗಿರಬೇಕು.
- ಮಾಸಿಕ ಆದಾಯವು ರೂ.15000 ಕ್ಕಿಂತ ಕಡಿಮೆಯಿರಬೇಕು ಮತ್ತು EPFO/ESIC/NPS ಇರಬಾರದು.
ಪ್ರಯೋಜನಗಳು
- 60 ವರ್ಷ ವಯಸ್ಸನ್ನು ತಲುಪಿದ ನಂತರ, ಫಲಾನುಭವಿಗಳಿಗೆ ತಿಂಗಳಿಗೆ ರೂ.3000/- ಗಳ ಮಾಸಿಕ ಖಚಿತ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
- ಫಲಾನುಭವಿಯ ಮರಣದ ನಂತರ, ಸಂಗಾತಿಗೆ 50% ಮಾಸಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ ಅಂದರೆ 1500 ರೂ ಮಾಸಿಕ ವಿಂಚಣಿ ಪಡೆಯುತ್ತಾರೆ.
- ಪತಿ ಮತ್ತು ಪತ್ನಿ, ಇಬ್ಬರೂ ಯೋಜನೆಗೆ ಸೇರಿದರೆ, ಅವರು ರೂ. 6000/- ಮಾಸಿಕ ಪಿಂಚಣಿ ಜಂಟಿಯಾಗಿ ಪಡೆಯುತ್ತಾರೆ.