ನಮಸ್ಕಾರ ಸ್ನೇಹಿತರೇ ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ಕುಟುಂಬಕ್ಕೆ ಉಚಿತ ಗ್ಯಾಸ್ ಜೊತೆಗೆ ಸಬ್ಸಿಡಿ ಸಿಗಲಿದೆ ಮತ್ತೆ ಇದರ ಒಂದು ಅರ್ಜಿ ಸಲ್ಲಿಸುವುದು ಹೇಗೆ ಇದು ಯಾರಿಗೆ ಸಿಗುತ್ತೆ ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ನಮಸ್ಕಾರ ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಈ ಹಿಂದೆ 2023 ಡಿಸೆಂಬರ್ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು ಆಗ ಅರ್ಜಿ ಸಲ್ಲಿಸಿದವರಿಗೆ ಈಗ ಉಚಿತ ಗ್ಯಾಸ್ ಜೊತೆಗೆ ಸಬ್ಸಿಡಿ ಸಿಗುತ್ತೆ ಈಗಾಗಲೇ ಕೆಲವರಿಗೆ ಸಿಕ್ಕಿದೆ, ಇನ್ನ ಕೆಲವರಿಗೆ ಸದ್ಯದಲ್ಲೇ ವಿತರಣೆ ಆಗಲಿದೆ.
ಉಚಿತ ಗ್ಯಾಸ್ ಯಾರಿಗೆ ಸಿಗುತ್ತೆ
- ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವಂತಹ ಪ್ರತಿ ಕುಟುಂಬಕ್ಕೆ ಈ ಒಂದು ಯೋಜನೆ ಸಿಗುತ್ತೆ.
- ಉಚಿತ ಗ್ಯಾಸ್ ಪಡೆಯಲು ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇರಬೇಕಾಗುತ್ತೆ.
ಅರ್ಜಿ ಸಲ್ಲಿಸಿದವರಿಗೆ ಏನು ಸಿಗುತ್ತೆ
- ಪಿ.ಎಂ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಉಚಿತ ಗ್ಯಾಸ್ ಸಿಲೆಂಡರ್ ಸಿಗುತ್ತೆ.
- ಗ್ಯಾಸ್ ಸ್ಟೋವ್ ಸಿಗುತ್ತೆ.
- ಮತ್ತೆ ಗ್ಯಾಸ್ ಕನೆಕ್ಷನ್ ಮಾಡುವಂತ ಪ್ರತಿಯೊಂದು ವಸ್ತುಗಳು ಸಿಗುತ್ತೆ.
- ಮೊದಲ ಬಾರಿಗೆ ಗ್ಯಾಸ್ ಸಿಲೆಂಡರ್ ಉಚಿತವಾಗಿ ತುಂಬಿಸಿಕೊಡಲಾಗುವುದು.
ಅರ್ಜಿ ಸಲ್ಲಿಸಿದವರಿಗೆ ಗ್ಯಾಸ್ ಯಾವಾಗ ಸಿಗುತ್ತೆ
ಪಿ.ಎಂ ಉಜ್ವಲ ಯೋಜನೆ ಅಡಿಯಲ್ಲಿ ಯಾರು ಅರ್ಜಿ ಸಲ್ಲಿಸಿರುತ್ತಾರೆ ಅವರಿಗೆ ಗ್ಯಾಸ್ ವಿತರಣೆ ಮಾಡಲು ಈಗಾಗಲೇ ಪ್ರಾರಂಭವಾಗಿದೆ ಸದ್ಯದಲ್ಲಿ ಎಲ್ಲರಿಗೂ ಈ ಒಂದು ಉಚಿತ ಗ್ಯಾಸ್ ಸಿಗುತ್ತೆ ಮತ್ತು ಅರ್ಜಿ ಸಲ್ಲಿಸಿದವರಿಗೆ ಎಸ್ಎಂಎಸ್ ಮುಖಾಂತರ ಪ್ರತಿಯೊಂದು ಮಾಹಿತಿ ಸಿಗುತ್ತೆ. ಈ ರೀತಿಯಾಗಿ ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವಂತಹ ಪ್ರತಿಯೊಬ್ಬರೂ ಕೂಡ ಉಚಿತ ಗ್ಯಾಸ್ ಪಡೆಯಬಹುದು.









