SC ST ನಿಗಮದಿಂದ 1 ರಿಂದ 2 ಲಕ್ಷದ ವರೆಗೆ ಸಾಲಸೌಲಭ್ಯ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಯೋಜನೆಗಳು ಪ್ರಾರಂಭವಾಗಿದೆ ಇದರಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಯೋಜನಗಳು ಪ್ರಾರಂಭವಾಗಿದ್ದು ಇದರಲ್ಲಿ ಸ್ವಯಂ ಉದ್ಯೋಗ ಮಾಡುವವರು ಮತ್ತು ರೈತರು ಮತ್ತು ವ್ಯಾಪಾರ ಮಾಡುವವರು ಈ ಒಂದು ಯೋಜನೆ ಅಡಿಯಲ್ಲಿ ಸಾಲ ಮತ್ತು ಸಹಾಯಧನ ಪಡೆಯಬಹುದು.

SC ST ಯೋಜನೆಗಳು

  • ಸ್ವಯಂ ಉದ್ಯೋಗ ನೇರ ಸಲ ಯೋಜನೆ
  • ಭೂ ಒಡೆತನ ಯೋಜನೆ
  • ಗಂಗಾ ಕಲ್ಯಾಣ ಯೋಜನೆ
  • ಸ್ವಾವಲಂಬಿ ಸಾರಥಿ ಯೋಜನೆ
  • ಮೈಕ್ರೋ ಕ್ರೆಡಿಟ್ ಯೋಜನೆ
  • ಉದ್ಯಮಶೀಲತಾ ಅಭಿವೃದ್ಧಿ ಯೋಜನೆ

ಈ ಯೋಜನೆಗಳ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಯೋಜನೆ ವಿವರ
  • ಪಾಸ್ಪೋರ್ಟ್ ಗಾತ್ರದ ಫೋಟೋ

ಅರ್ಜಿ ಸಲ್ಲಿಸಲು ಬೇಕಾಗುವಂತಹ ಅರ್ಹತೆಗಳು

  • ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುಂಪಿಗೆ ಸೇರಿದವರಾಗಿರಬೇಕು
  • ಅರ್ಜಿದಾರರ ಗ್ರಾಮೀಣ ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 1.5 ಲಕ್ಷ ಮೀರಿರಬಾರದು
  • ಅರ್ಜಿದಾರರು ಪಟ್ಟಣ ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 2 ಲಕ್ಷ  ಮೀರಿರಬಾರದು
  • ಅರ್ಜಿದಾರರು ವಯಸ್ಸು 21ರಿಂದ 60 ವರ್ಷ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಡಿಸೆಂಬರ್ 15 2023

ಅಜ್ಜಿ ಸಲ್ಲಿಸುವ ಲಿಂಕ್:

https://sevasindhu.karnataka.gov.in/Sevasindhu/DepartmentServicesKannada

Leave a comment