ಜೂನ 30ರ ಒಳಗೇ ಇ-ಕೆವೈಸಿ ಮಾಡದಿದ್ರೆ ಪಡಿತರ ಚೀಟಿ ಅಮಾನ್ಯ

ಹಳೆ ರೇಷನ ಕಾರ್ಡ ರದ್ದು ಇವಾಗಲೆ e-KYC ಮಾಡಿ

ಪಡಿತರ ಚೀಟಿ ಸರಕಾರದ ಮಹತ್ವದ ದಾಖಲೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತಿದೆ. ಇದು ಕೇವಲ ಅಕ್ಕಿ, ಗೋಧಿ ಪಡೆವ ದಾರಿ ಮಾತ್ರವಲ್ಲದೇ, ಅನೇಕ ಸರಕಾರಿ ಸೌಲಭ್ಯಗಳು ಹಾಗೂ ಸಬ್ಸಿಡಿ ಯೋಜನೆಗಳ ಪ್ರವೇಶದ ದ್ವಾರವೂ ಹೌದು.

ಇದೀಗ, ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗವು ಒಂದು ತೀವ್ರ ಸೂಚನೆಯೊಂದಿಗೆ ಹೊರಬಂದಿದ್ದು, ಎಲ್ಲಾ ಪಡಿತರ ಚೀಟಿದಾರರು ಜೂನ್ 30, 2025 ಒಳಗೆ ತಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲೇಬೇಕು ಎಂದು ಅಂತಿಮ ಗಡಿಯನ್ನು ನಿಶ್ಚಿತಗೊಳಿಸಿದೆ.

ಪ್ರತಿ ಫಲಾನುಭವಿ ತನ್ನ ಸುತ್ತಲಿನ ಪಡಿತರ ಅಂಗಡಿಗೆ ಅಥವಾ ಗ್ರಾಮ ಒನ, ಕರ್ನಾಟಕ ಒನ್‌, ಸಿ.ಎಸ.ಸಿ ಕೆಂದ್ರಗಳಿಗೆ ಭೇಟಿ ನೀಡಿ, ಬೆರಳಚ್ಚು ದೃಢೀಕರಣದ ಮೂಲಕ ತನ್ನ ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳಬೇಕು.

ಇಲ್ಲಿವರೆಗೆ ನೋಂದಾಯಿಸದ ಅಥವಾ ಮರು ದೃಢೀಕರಣ ಮಾಡಿಸದ ಸದಸ್ಯರು ಕೂಡಲೇ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಜೂನ್ 30 ನಂತರ ಪ್ರಕ್ರಿಯೆ ಮಾಡದವರ ಪಡಿತರ ಚೀಟಿ ತಾತ್ಕಾಲಿಕವಾಗಿ ಅಮಾನ್ಯಗೊಳ್ಳುವ ಸಾಧ್ಯತೆ ಇದೆ, ಮತ್ತು ಜುಲೈ 2025ರಿಂದ ಅವರ ಪಡಿತರ ವಿತರಣೆ ಸ್ಥಗಿತಗೊಳ್ಳಲಿದೆ ಎಂಬುದಾಗಿ ಇಲಾಖೆ ತೀವ್ರವಾಗಿ ಸ್ಪಷ್ಟಪಡಿಸಿದೆ.

ಯಾವ ಪಡಿತರ ಚಿಟಿ ರದ್ದು

ನಕಲಿ ದಾಖಲೆಗಳ ನೆರವಿನಿಂದ ಪಡೆದ BPL ಪಡಿತರ ಚೀಟಿಗಳ ವಿರುದ್ಧ ಸರ್ಕಾರ ತೀವ್ರ ಕ್ರಮ ಕೈಗೊಂಡಿದ್ದು, ಅಂತಹ ಕಾರ್ಡ್ಗಳನ್ನು ಗುರುತಿಸಿ APL ವರ್ಗಕ್ಕೆ ವರ್ಗಾಯಿಸುವ ಕಾರ್ಯ ಪ್ರಗತಿಯಲ್ಲಿ ಇದೆ.

 

ಬಡವರ ಜೀವನದ ನಕ್ಷೆಯನ್ನು ಬದಲಾಯಿಸಬಲ್ಲಂತಹ ಯೋಜನೆಗಳಾದ ಉಚಿತ ಆಹಾಧಾನ್ಯ ವಿತರಣೆಯಿಂದ ಹಿಡಿದು, ಆರೋಗ್ಯ ವಿಮೆ, ಉಚಿತ ಚಿಕಿತ್ಸೆ, ಮನೆ ಕಟ್ಟುವ ಸಹಾಯ, ವಿದ್ಯಾರ್ಥಿಗಳಿಗೆ ಹಣಕಾಸು ನೆರವು ಇತ್ಯಾದಿ ಸೌಲಭ್ಯಗಳು ಪಡಿತರ ಚೀಟಿಯ ಮೂಲಕ ದೊರೆಯುತ್ತವೆ. ಹೀಗಾಗಿ, ಚೀಟಿ ನಿಜಕ್ಕೂ ದುರ್ಬಲ ಕುಟುಂಬಗಳಿಗೆ ಸೆರಬೇಕು ಎಂಬ ಸರ್ಕಾರದ ಆಶೆಯವಾಗುದೆ.

ಆಹಾರ ಇಲಾಖೆಯ ವೆಬಸೈಟ ಲಿಂಕ

ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ವೆಬ್ಸೈಟ್ಗಳಿಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು. ಉದಾಹರಣೆಗೆ, ಕರ್ನಾಟಕದವರು ahara.kar.nic.in ಗೆ ಭೇಟಿ ನೀಡಬಹುದು.

ಮೊಬೈಲ್ OTP ದೃಢೀಕರಣ:

ಆಧಾರ್ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಒಮ್ಮೆ ಮಾತ್ರ ಬಳಸುವ ಪಾಸ್ವರ್ಡ್ (OTP) ಬರುತ್ತದೆ. ಅದನ್ನು ನಮೂದಿಸಿ ತಮ್ಮ ಗುರುತನ್ನು ದೃಢಪಡಿಸಬಹುದು.

BPL ಕಾರ್ಡ್ ಹೊಂದಿದವರಿಗೆ ಉಚಿತ ಗ್ಯಾಸ ಸಿಲಿಂಡರ್, ಆಹಾರ ವಸ್ತುಗಳು ಮತ್ತು ಇತರ ಬಹುಮಾನಿತ ಯೋಜನೆಗಳ ಲಾಭ ದೊರೆಯುತ್ತಿತ್ತು. ಇವುಗಳನ್ನು ನಿಜವಾಗಿ ಬಡ ಕುಟುಂಬಗಳಿಗಾಗಿ ರೂಪುಗೊಳಿಸಲಾಯಿತಾದರೂ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳು ಕೂಡ ತಪ್ಪು ವಿಧಾನಗಳಿಂದ ಕಾರ್ಡ್ಗಳನ್ನು ಪಡೆದು ಸೌಲಭ್ಯ ಪಡೆದುಕೊಳ್ಳುತ್ತಿರುವುದಾಗಿ ದಾಖಲೆಗಳು ಸಾಬೀತುಪಡಿಸುತ್ತಿವೆ.

 

ಹೀಗಾಗಿ ಸರ್ಕಾರದ ಹೊಸ ಕ್ರಮಗಳು ನ್ಯಾಯಸಮ್ಮತ ವಿತರಣಾ ವ್ಯವಸ್ಥೆಗೆ ದಾರಿ ಮಾಡಿಕೊಡಲಿವೆ.

Leave a comment