ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಇರುವಂತಹ ಪ್ರತಿಯೊಂದು ಕುಟುಂಬಕ್ಕೂ ಅನ್ನ ಭಾಗ್ಯ ಯೋಜನೆ ಸಿಗುತ್ತದೆ. ಅಂತಾನೆ ಹೇಳಬಹುದು ಈ ಒಂದು ಅನ್ನಭಾಗ್ಯ ಯೋಜನೆಯಿಂದ ಎಲ್ಲರಿಗೂ ಐದು ಕೆಜಿ ಅಕ್ಕಿ ಜೊತೆಗೆ 170 ಸಿಗುತ್ತೆ. ಮತ್ತೆ ಇದರ ಒಂದು ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ ನೋಡಬಹುದು.
ರಾಜ್ಯ ಸರ್ಕಾರ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಜುಲೈ 10 ರಂದು ಬಿಡುಗಡೆ ಮಾಡಿದೆ. ಮತ್ತೆ ಈ ಒಂದು ಯೋಜನೆಯಿಂದ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದು ಕುಟುಂಬಕ್ಕೂ ಇದರಿಂದ ತುಂಬಾ ಅನುಕೂಲವಾಗಲಿದೆ. ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಯ ದುಡ್ಡು ಸಿಗುತ್ತೆ.
ಈ ಒಂದು ಯೋಜನೆಯಿಂದ ಹಣ ಪಡೆಯಲು ಏನು ಮಾಡಬೇಕು
- ಈ ಒಂದು ಅಣ್ಣ ಬಗ್ಗೆ ಯೋಜನೆಯಡಿಯಿಂದ ಹಣ ಪಡೆಯಲು ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ರೇಷನ್ ಕಾರ್ಡ್ ಇರಬೇಕಾಗುತ್ತೆ.
- ಬಿಪಿಎಲ್ ಕಾರ್ಡ್ ನಲ್ಲಿ ಇರುವಂತಹ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆ ಇರಬೇಕಾಗುತ್ತೆ.
- ಬಿಪಿಎಲ್ ಕಾರ್ಡ್ ನಲ್ಲಿ ಯರುವಂತಹ ಮನೆಯ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು.
- ಮತ್ತು ಅಂಥೋದಯ ಕಾರ್ಡ್ ಇರುವಂತಹ ಕುಟುಂಬಗಳು ಮೂರಕ್ಕಿಂತ ಹೆಚ್ಚು ಜನ ಇದ್ದಲ್ಲಿ ಈ ಒಂದು ಯೋಜನೆ ಸಿಗುತ್ತೆ.
- ಈ ಒಂದು ಯೋಜನೆಯಿಂದ ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ 170 ರೂಪಾಯಿ ಮತ್ತು ಐದು ಜನ ಇದ್ದಲ್ಲಿ 25 ಕೆಜಿ ಅಕ್ಕಿ 850 ರೂಪಾಯಿ ಸಿಗುತ್ತೆ.
ಯಾರಿಗೆ ಈ ಒಂದು ಯೋಜನೆ ಸಿಗೋದಿಲ್ಲ
- ಎಪಿಎಲ್ ಕಾರ್ಡ್ ಇರುವಂತಹ ಕುಟುಂಬಕ್ಕೆ ಈ ಒಂದು ಯೋಜನೆ ಸಿಗುವುದಿಲ್ಲ.
- ಬಿಪಿಎಲ್ ಕಾರ್ಡ್ ಇದ್ದರೂ ಬ್ಯಾಂಕ್ ಅಕೌಂಟ್ ಇಲ್ಲದೆ ಇರುವಂತಹ ಕುಟುಂಬಕ್ಕೆ ಈ ಒಂದು ಯೋಜನೆ ಸಿಗೋದಿಲ್ಲ.
- ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಇರುವಂತಹ ಮುಖ್ಯಸ್ಥರು ಇದ್ದಲ್ಲಿ ಈ ಒಂದು ಯೋಜನೆಯಿಂದ ಹಣ ಸಿಗುವುದಿಲ್ಲ.
- ಅಂತೋದಯ ಕಾರ್ಡ್ ಇದ್ದವರಿಗೆ ಮೂರಕ್ಕಿಂತ ಕಡಿಮೆ ಇರುವಂತ ಜನರಿಗೆ ಸಿಗುವುದಿಲ್ಲ.
ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಅಂತ ಚೆಕ್ ಮಾಡುವುದು ಹೇಗೆ.
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿಯೊಂದು ಕುಟುಂಬಕ್ಕೂ 5 ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿ ದುಡ್ಡು ನೇರವಾಗಿ ಖಾತೆಗೆ ಜಮಾ ಆಗುತ್ತೆ. ಇವಾಗ ಯಾರಿಗೆ ಜಮಾ ಆಗಿದೆ ಅಥವಾ ಜಮಾ ಆಗಿಲ್ಲ ಅಂತ ಚೆಕ್ ಮಾಡುವುದು ಹೇಗೆ ತಿಳಿಯೋಣ ಬನ್ನಿ.
- ಮೊದಲಿಗೆ ಈ ಒಂದು ಲಿಂಕನ ಬಳಸಿ ವೆಬ್ಸೈಟ್ ಮೂಲಕ ಓಪನ್ ಮಾಡಿ.
- ನಂತರ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತೆ.
- ಮೊದಲಿಗೆ ನಿಮ್ಮ ಪ್ರಸ್ತುತ ವರ್ಷ ಸೆಲೆಕ್ಟ್ ಮಾಡ್ಕೊಳ್ಳಿ.
- ನಂತರ ಪ್ರಸ್ತುತ ತಿಂಗಳು ಸೆಲೆಕ್ಟ್ ಮಾಡಿಕೊಳ್ಳಿ.
- ನಂತರ ನಿಮ್ಮ ಒಂದು ಬಿಪಿಎಲ್ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ ಮತ್ತು ಕೆಳಗಡೆ GO ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ರೇಷನ್ ಕಾರ್ಡ್ ಡೀಟೇಲ್ಸ್ ಬರುತ್ತೆ.
- ಅದರಲ್ಲಿ ನಿಮ್ಮ ಕುಟುಂಬ ಸದಸ್ಯರ ಮುಖ್ಯಸ್ಥರ ಹೆಸರು.
- ನಂತರ ನಿಮ್ಮ ಒಂದು ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ ಮತ್ತು ನಿಮ್ಮ ಒಂದು ಕುಟುಂಬಕ್ಕೆ ಎಷ್ಟು ಕೆಜಿ ಅಕ್ಕಿ ಬರುತ್ತೆ ಮತ್ತು ನಿಮ್ಮ ಒಂದು ಕುಟುಂಬಕ್ಕೆ ಎಷ್ಟು ದುಡ್ಡು ಬರುತ್ತೆ ಪ್ರತಿಯೊಂದು ಡೀಟೇಲ್ಸ್ ಇದರಲ್ಲಿ ನೋಡಬಹುದು.
- ಕೆಳಗಡೆ ನಿಮ್ಮ ಒಂದು ಹಣ ಬಂದಿದ್ದರೆ ನಿಮ್ಮ ಒಂದು ಅಕೌಂಟ್ಗೆ ಜಮಾ ಆಗಿದೆ ಅಂತ ತೋರಿಸುತ್ತದೆ ಇಲ್ಲ ಅಂತ ಅಂದ್ರೆ ಇನ್ನೂ ಪ್ರಗತಿಯಲ್ಲಿ ಇದೆ ಅಂತ ತೋರಿಸುತ್ತದೆ.
ಈ ರೀತಿಯಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯು ಈ ಒಂದು ಯೋಜನೆಯ ಸ್ಥಿತಿಯನ್ನು ಚೆಕ್ ಮಾಡಬಹುದು.