ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ತೀರ್ಮಾನಿಸಿದಂತೆ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ. ಈ ಒಂದು ಯೋಜನೆ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನುಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತೆ ಅಂತ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇದು ಯಾವ ರೀತಿ ಅರ್ಜಿ ಸಲ್ಲಿಸಬೇಕು ಅದಕ್ಕೆಲ್ಲ ಏನೇನು ಡಾಕ್ಯುಮೆಂಟ್ಸ್ ಬೇಕು ಅಂತ ಸಂಪೂರ್ಣ ಮಾಹಿತಿ ಕೆಳಗಡೆ ಕೊಡಲಾಗಿದೆ ಪೂರ್ತಿಯಾಗಿ ಓದಿ.
ಗೃಹಲಕ್ಷ್ಮಿ ಯೋಜನೆ ಯಾರಿಗೆ ಸಿಗುತ್ತೆ ಅತ್ತೆಗೋ, ಸೊಸೆಗೂ.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಮುಖ್ಯ ಯೋಜನೆ ಬಂದು ಗೃಹಲಕ್ಷ್ಮಿ ಯೋಜನೆ. ಈ ಯೋಜನೆ ರಾಜ್ಯದ ಪ್ರತಿ ಮಹಿಳೆಯರಿಗೂ ಈ ಯೋಜನೆ ಸಿಗುತ್ತೆ ಇದಕ್ಕೆ ಬಿಪಿಎಲ್ ಕಾರ್ಡ್ ಇದ್ರೂ ನಡೆಯುತ್ತೆ ಅಥವಾ ಎಪಿಎಲ್ ಕಾರ್ಡ್ ಇದ್ರೂ ನಡೆಯುತ್ತೆ. ಎಲ್ಲರಿಗೂ ಈ ಒಂದು ಯೋಜನೆ ಸಿಗಲಿದೆ ಈ ಯೋಜನೆಯನ್ನು ಪಡೆಯಲು ಮೊದಲು ಕರ್ನಾಟಕದಲ್ಲಿ ನೆಲೆಸಿದವರು ಇರಬೇಕು ಮತ್ತು ಕುಟುಂಬದ ಯಜಮಾನಿ ಆಗಿರಬೇಕು ಅಂದ್ರೆ ಒಂದು ಅರ್ಜಿ ಒಂದು ಕುಟುಂಬಕ್ಕೆ ಮಾತ್ರ. ಅಂದರೆ ಒಂದು ಕುಟುಂಬದಲ್ಲಿ ಅತ್ತೆ ಸೊಸೆ ಇದ್ದರೆ ಮನೆಯ ಯಜಮಾನಿ ಅತ್ತೆ ಆಗಿರುತ್ತಾರೆ ಅವರಿಗೆ ಈ 2000 ಹಣ ಅವರ ಖಾತೆಗೆ ಜಮಾ ಆಗುತ್ತೆ.
ಈ ಯೋಜನೆ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರನಾ ?
ಈ ಗ್ರಹಲಕ್ಷ್ಮಿ ಯೋಜನೆ ರಾಜ್ಯದ ಎಲ್ಲಾ ಮಹಿಳೆಯರಿಗೂ ಸಿಗುತ್ತೆ ಇದಕ್ಕೆ ಬಿಪಿಎಲ್ ಕಾರ್ಡ್ ಇರಬೇಕು ಅಂತ ಏನೂ ಇಲ್ಲ ಎಪಿಎಲ್ ಕಾರ್ಡ್ ಇದ್ರೆ ನಡೆಯುತ್ತೆ ಇದರಲ್ಲಿ ಯಾವುದೇ ಕಾರ್ಡ್ ಇದ್ರೂ ಈ ಒಂದು ಯೋಜನೆ ಅವರಿಗೆ ಸಿಗುತ್ತಂತೆ ಹೇಳಬಹುದು.
ರೇಷನ್ ಕಾರ್ಡ್ ಕಡ್ಡಾಯ ?
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ ಗೃಹಲಕ್ಷ್ಮಿ ಯೋಜನೆ, ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿ ಇರಬೇಕಾಗುತ್ತೆ. ಇದಕ್ಕೆ ಯಾವ ರೇಶನ್ ಕಾರ್ಡ್ ಮುಖ್ಯ ಅಂದ್ರೆ ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಮತ್ತು ಅಂತೋದಯ ಕಾರ್ಡ್ ಈ ಮೂರರಲ್ಲಿ ಯಾವುದಾದರೂ ಒಂದು ಕಾರ್ಡ್ ಇದ್ದರೆ ನಿಮ್ಮ ಅಕೌಂಟಿಗೆ ನೇರವಾಗಿ 2000 ಹಣ ಪಡೆಯಬಹುದು.
ಎಪಿಎಲ್ ಕಾರ್ಡ್ ಇದ್ದವರಿಗೆ 2000 ಹಣ ಸಿಗುತ್ತೆ.
ಇದೀಗ ರಾಜ್ಯ ಸರ್ಕಾರ ಘೋಷಣೆ ಮಾಡಿದರು ಹಾಗೆ ರಾಜ್ಯದ ಎಲ್ಲಾ ಕುಟುಂಬದ ಯಜಮಾನಿಗೆ 2000 ರೂಪಾಯಿ ಸಿಗುತ್ತೆ ಅಂತ ಹೇಳಿದ್ದಾರೆ. ಇದಕ್ಕೆ ಎಪಿಎಲ್ ಕಾರ್ಡ್ ಇದ್ರು ಕೂಡ ಈ ಒಂದು ಯೋಜನೆ ಅವರಿಗೆ ಅನ್ವಯಿಸುತ್ತೆ ನಿಮ್ಮ ಹತ್ತಿರ ಎಪಿಎಲ್ ಕಾರ್ಡ್ ಇಲ್ಲದಿದ್ದರೆ ಈ ಒಂದು ಯೋಜನೆ ನಿಮಗೆ ಸಿಗುವುದಿಲ್ಲ
ರೇಷನ್ ಕಾರ್ಡ್ ಯಾಕೆ ಮುಖ್ಯ?
ಗೃಹಲಕ್ಷ್ಮಿ ಯೋಜನೆ ಪಡೆಯಲು ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗುತ್ತೆ. ಏಕೆಂದರೆ ರೇಷನ್ ಕಾರ್ಡ್ ನಲ್ಲಿ ಪ್ರತಿ ಕುಟುಂಬದ ವಿವರಗಳು ಇರುತ್ತೆ. ಅದರಲ್ಲಿ ಮನೆ ಯಜಮಾನಿ ಯಾರು ಅಂತ ಅದರಲ್ಲಿ ಇರುತ್ತೆ ಆದ್ದರಿಂದ ಸರ್ಕಾರಕ್ಕೆ ತುಂಬಾ ಸುಲಭವಾಗಿ ಮನೆ ಯಜಮಾನ ಯಾರು ಅಂತ ಕಂಡುಹಿಡಿಯಬಹುದು. ಆದಕಾರಣ ಪ್ರತಿ ಕುಟುಂಬಕ್ಕೆ ರೇಷನ್ ಕಾರ್ಡ್ ಇದ್ದರೆ ಮಾತ್ರ ಅವರ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತೆ. ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲದಿದ್ದರೆ ತಕ್ಷಣ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಮಾಡಿಸಬೇಕಾಗುತ್ತದೆ.
ಅರ್ಜಿ ಹಾಕಲು ಕೊನೆಯ ದಿನಾಂಕ.
ಗೃಹಲಕ್ಷ್ಮಿ ಯೋಜನೆಯ ಅರ್ಜಿ ಹಾಕಲು ದಿನಾಂಕ ಜೂನ್ 15 ರಿಂದ ಜುಲೈ 15ರವರೆಗೆ ಕೊನೆಯ ದಿನಾಂಕ ಇದ್ದು ಅದರೊಳಗೆ ಎಲ್ಲ ಕುಟುಂಬದ ಮಹಿಳೆಯರು ಈ ಒಂದು ಅರ್ಜಿಯನ್ನ ಹಾಕಬಹುದು.
ಅರ್ಜಿ ಹಾಕಲು ಬೇಕಾಗುವಂತ ದಾಖಲಾತಿಗಳು.
ಈ ಯೋಜನೆಯನ್ನು ಪಡೆಯಲು ಬೇಕಾಗುವ ದಾಖಲಾತಿಗಳು ಯಾವುವು ಅಂದರೆ
- ಆಧಾರ್ ಕಾರ್ಡ್
- ಎಪಿಎಲ್ ಅಥವಾ ಬಿಪಿಎಲ್ ಅಥವಾ ಅಂಥೋದಯ ರೇಷನ್ ಕಾರ್ಡ್ ಇರಬೇಕು
- ನಿಮ್ಮ ಬ್ಯಾಂಕ್ ಅಕೌಂಟ್ ಇರಬೇಕು
- ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು
- ಬ್ಯಾಂಕ್ ಪಾಸ್ ಬುಕ್ ಇರಬೇಕು
- ಪ್ಯಾನ್ ಕಾರ್ಡ್ ಇರಬೇಕು
ಜುಲೈ 15 ದಿನಾಂಕದಂದು 2 ಸಾವಿರ ರೂಪಾಯಿಗಳನ್ನು ಎಲ್ಲರ ಖಾತೆಗೆ ನೇರವಾಗಿ ಜಮಾ ಆಗುತ್ತದೆ
ಅರ್ಜಿ ಹಾಕಿರೋ ರಾಜ್ಯದ ಎಲ್ಲಾ ಮಹಿಳೆಯರಿಗೂ ಅಂದರೆ ಪ್ರತಿ ಕುಟುಂಬದ ಯಜಮಾನಿಗೆ ಸಾವಿರ ರೂಪಾಯಿ ಜುಲೈ 15ಕ್ಕೆ ಮೊದಲನೇ ಕಂತು ಬಿಡುಗಡೆ ಮಾಡಲಾಗುತ್ತೆ. ಅಂತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ. ಆದ ಕಾರಣ ಇದಕ್ಕೆ ಯಾರೆಲ್ಲಾ ಅರ್ಹರು ಇರುತ್ತಾರೆ ಅವರು ಈ ಒಂದು ಅರ್ಜಿಯನ್ನು ತಪ್ಪದೇ ಹಾಕಬೇಕು ಆಗ ಮಾತ್ರ ನಿಮ್ಮ ಅಕೌಂಟಿಗೆ ನೇರವಾಗಿ ಹಣ ಜಮಾ ಆಗುತ್ತೆ.
ಅಂಬೇಡ್ಕರ್ ನಿಗಮ 2025 ಹೊಸ ಯೋಜನೆಗಳು ಪ್ರಾರಂಭ
ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ
ಕರ್ನಾಟಕದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ 2025 ಅರ್ಜಿ ಪ್ರಾರಂಭ
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025
ಹೊಸ ರೇಷನ್ ಕಾರ್ಡ್ ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025.










3 thoughts on “ಗೃಹಲಕ್ಷ್ಮಿ ಯೋಜನೆ ಅರ್ಜಿ ಪ್ರಾರಂಭ ಕೊನೆಯ ದಿನಾಂಕ ?”